Follow Us On

WhatsApp Group
Big News
Trending

ಬರಗದ್ದೆ ಸೊಸೈಟಿಯ ಬಾಗಿಲು ತೆರೆಯದೆ ಹೈಡ್ರಾಮಾ! ಹೊರಗಡೆಯೇ ನಡೆಯಿತು ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ

ಅಧ್ಯಕ್ಷರಾಗಿ ಗಣಪತಿ ಗೋಪಾಲಕೃಷ್ಣ ಹೆಗಡೆ ಆಯ್ಕೆ
ಮಹಾಬಲೇಶ್ವರ ಗಜಾನನ ಭಟ್ ಅವರಿಗೆ ಒಲಿದ ಉಪಾಧ್ಯಕ್ಷ ಹುದ್ದೆ

ಕುಮಟಾ: ತಾಲೂಕಿನ ಬರಗದ್ದೆ ಗ್ರಾಮೀಣ ಸೇವಾ ಸಹಕಾರಿ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದು, ಇದು ಜಿಲ್ಲೆಯಾದ್ಯಂತ ಸುದ್ದಿಯಾಗಿತ್ತು. ತಮಗೆ ಅನ್ಯಾಯವಾಗಿದೆ ಎಂದು ಪ್ರತಿಭಟನೆಯ ಹಾದಿ ತುಳಿದಿದ್ದ ಸಂಘದ ರೈತ ಸದಸ್ಯರು, ನ್ಯಾಯಕ್ಕಾಗಿ ಸಿಡಿದೆದ್ದು ಸುದೀರ್ಘ ಹೋರಾಟವನ್ನೇ ನಡೆಸಿದ್ದರು. ಈಗ ಈ ಹೋರಾಟ ಒಂದು ನಿರ್ಣಾಯಕ ಹಂತಕ್ಕೆ ತಲುಪಿದಂತೆ ಕಾಣುತ್ತಿದೆ. ಇತ್ತಿಚೆಗೆ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಬದಲಾವಣೆಯ ಗಾಳಿ ಬೀಸಿದ್ದು, ಹೊಸ ಮುಖಗಳು ಸಂಘಕ್ಕೆ ಆಯ್ಕೆಯಾಗಿದ್ದಾರೆ. ಎಲ್ಲಾ 11 ಕ್ಷೇತ್ರದಲ್ಲೂ ತಮ್ಮದೇ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ರೈತ ಹೋರಾಟಗಾರರು ಹಳೆಯ ಆಡಳಿತವನ್ನು ತಿರಸ್ಕರಿಸಿದ್ದರು.

ಈಗ ಸಂಘಕ್ಕೆ ಭಾನುವಾರ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗಿದ್ದು, ಗಣಪತಿ ಗೋಪಾಲಕೃಷ್ಣ ಹೆಗಡೆ ಮುಂದಿನ ಐದು ವರ್ಷದ ಅವಧಿಗೆ ಅಧ್ಯಕ್ಷರಾಗಿ, ಮಹಾಬಲೇಶ್ವರ ಗಜಾನನ ಭಟ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸಂಬoಧ ವಿಸ್ಮಯ ಟಿ.ವಿಗೆ ಪ್ರತಿಕ್ರಿಯೆ ನೀಡಿರುವ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಗಣಪತಿ ಗೋಪಾಲಕೃಷ್ಣ ಹೆಗಡೆ, ಅನ್ಯಾಯವಾದ ರೈತರಿಗೆ ನ್ಯಾಯ ಕೊಡಿಸುವುದು ನಮ್ಮ ಮೊದಲ ಆದ್ಯತೆ. ಅಲ್ಲದೆ, ಇದುವರೆಗೆ ಏನೆಲ್ಲಾ ಅನ್ಯಾಯ, ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತೋ ಅದನ್ನೆಲ್ಲ ಪರಿಶೀಲಿಸಿ, ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಸಂಘದ ಬಾಗಿಲು ತೆರೆಯಲು ಬರಲಿಲ್ಲ! ಹೊರಗಡೆ ನಡೆಯಿತು ಆಯ್ಕೆ ಪ್ರಕ್ರಿಯೆ

ಕಳೆದೆರಡು ವರ್ಷಗಳಿಂದ ಹಲವು ನಾಟಕೀಯ ಬೆಳವಣಿಗೆಗೆ ನಡೆಯುತ್ತಲೇ ಬಂದಿದ್ದು, ಕೊನೆಗಳಿಗೆಯ ಕ್ಲೈಮಾಕ್ಸ್ಎನಿಸಿಕೊಂಡ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲೂ ಹಲವು ಘಟನೆಗಳಿಗೆ ಸಾಕ್ಷಿಯಾಯಿತು. ಹಾಲಿ ಕಾರ್ಯದರ್ಶಿಗಳು ಮತ್ತು ಸಿಬ್ಬಂದಿಗಳು ಅಧ್ಯಕ್ಷರು, ಉಪಾಧ್ಯಕ್ಷರ ಚುನಾವಣೆ ವೇಳೆ ಸಂಘದ ಬಾಗಿಲು ತೆರೆಯಲು ಬರಲಿಲ್ಲ ಎಂಬ ಆರೋಪ ಎದುರಿಸುವಂತಾಗಿದೆ. ಹೀಗಾಗಿ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ಸಂಘದ ಬಾಗಿಲು ಹಾಕಿದ್ದರೂ, ಹೊರಗಡೆಯೇ ಈ ಚುನಾವಣಾ ಪ್ರಕ್ರಿಯೆ ನಡೆಯಿತು.

ಈ ಸಂಬoಧ ಪ್ರತಿಕ್ರಿಯಿಸಿದ ನೂನತ ಅಧ್ಯಕ್ಷರು ಮತ್ತು ಸದಸ್ಯರು, ಅದು ಕಾರ್ಯದರ್ಶಿ ಮತ್ತು ಸಿಬ್ಬಂದಿಗಳ ದುರ್ವತನೆ ಎಂದು ಆರೋಪಿಸಿದ್ದು, ಇದಕ್ಕೆ ಚುನಾವಣಾ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ, ಕಾನೂನು ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಚುನಾವಣೆಯಲ್ಲಿ ಗೆದ್ದವರು:

ಗಣಪತಿ ಗೋಪಾಲಕೃಷ್ಣ ಹೆಗಡೆ, ಮಹಾಬಲೇಶ್ವರ ಗಜಾನನ ಭಟ್, ಮಂಜುನಾಥ ರಾಮ ಹೆಗಡೆ, ರಾಜಾರಾಮ ಕೇಶವ ಹೆಬ್ಬಾರ್, ಸುಬ್ರಹ್ಮಣ್ಯ ಪ್ರಭಾಕರ ಹಂದೆ, ಬೀರಾ ಬೊಮ್ಮು ಗೌಡ, ಅನಂತ ಕೃಷ್ಣ ಮಡಿವಾಳ

ಅವಿರೋಧವಾಗಿ ಆಯ್ಕೆಯಾದವರು:

ಗಣೇಶ್ ಚಿದಾನಂದ ಭಟ್, ಗೀತಾ ಸತೀಶ್ ಭಟ್, ಗೀತಾ ಶ್ರೀಪತಿ ಶಾಸ್ತ್ರಿ ಹಾಗು ನಾಗಮ್ಮ ಮಾಸ್ತಿ ಮುಕ್ರಿ

ಈ ಹಿಂದೆ ನಡೆದ ಪ್ರತಿಭಟನೆಯ ಸುದ್ದಿಯ ಲಿಂಕ್ ಇಲ್ಲಿದೆ ನೋಡಿ

ವಿಸ್ಮಯ ನ್ಯೂಸ್, ಯೋಗೇಶ್ ಮಡಿವಾಳ ಕುಮಟಾ

Back to top button