Important
Trending

ಯಶ್ ಇಂಟರ್‌ನ್ಯಾಶನಲ್ ಫ್ಯಾಶನ್ ಅವಾರ್ಡ್ ನಲ್ಲಿ ಕಾರವಾರ ಮೂಲದ ದಂಪತಿಗೆ ರಾಜ್ಯ ರತ್ನ ಪ್ರಶಸ್ತಿ: ಸಂಗೀತ ವಿಭಾಗದಲ್ಲಿ ಪ್ರಶಸ್ತಿ ಪ್ರಧಾನ

ಕಾರವಾರ: ಯಶ್ ಇಂಟರ್‌ನ್ಯಾಶನಲ್ ಫ್ಯಾಶನ್ ಅವಾರ್ಡ್ ನಲ್ಲಿ ಕಾರವಾರ ಮೂಲದ ದಂಪತಿಗಳಿಗೆ ರಾಜ್ಯ ರತ್ನ ಪ್ರಶಸ್ತಿ ಲಭ್ಯವಾಗಿದೆ. ಸದ್ಯ ಗೋವಾದಲ್ಲಿ ನೆಲೆಸಿರುವ ಮೂಲತಃ ಕಾರವಾರದ ಶಿವನಾಥ ಸಾವಂತ್ ಹಾಗೂ ಇವರ ಪತ್ನಿ ನಾಗವೇಣಿ ದಂಪತಿ ಈ ಪ್ರಶಸ್ತಿಗೆ ಭಾಜನರಾದವರು. ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿವನಾಥ ಸಾವಂತ್ ಸಂಗೀತ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದವರಾಗಿದ್ದಾರೆ. 

ಅಮೃತ ಮಹೋತ್ಸವ, ಹಬ್ಬಗಳ ಸಂಭ್ರಮದ ಮಧ್ಯೆಯೇ ಸದ್ದಿಲ್ಲದೆ ಏರಿಕೆಯಾಗುತ್ತಿದೆ ಕೋವಿಡ್ ಕೇಸ್: ಜಿಲ್ಲೆಯಲ್ಲಿ 21 ಕೋವಿಡ್ ಕೇಸ್ ದೃಢ

2021ರಲ್ಲಿ ನಡೆದ ಹುಬ್ಬಳ್ಳಿ ಸುಮಧುರ ಫೌಂಡೇಶನ್‌ನ ಸಂಗೀತ ಸಂಜೆ ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಪ್ರಶಸ್ತಿ ಪಡೆದಿದ್ದರು. ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ನಡೆದ ನಾರ್ಥ್ ಕರ್ನಾಟಕ ಐಡಲ್ ಆಡಿಶನ್‌ನಲ್ಲಿ ಭಾಗವಹಿಸಿ ಸೆಮಿಫೈನಲ್ ತಲುಪಿದ್ದರು. ಹೀಗೆ ರಾಜ್ಯ, ಅಂತರರಾಜ್ಯ ಕಾರ್ಯಕ್ರಮ, ಸ್ಪರ್ಧೆಗಳಲ್ಲಿ ಭಾಗವಹಿಸಿದ ಸಾಧನೆ ಪರಿಗಣಿಸಿ ಸಂಗೀತ ವಿಭಾಗದಲ್ಲಿ ರಾಜ್ಯ ರತ್ನ ಪ್ರಶಸ್ತಿ ನೀಡಲಾಗಿದೆ ಎಂದು ಅವರ ಪತ್ನಿ ನಾಗವೇಣಿ ತಿಳಿಸಿದ್ದಾರೆ.

  • ರಾಜ್ಯ, ಅಂತರರಾಜ್ಯ ಕಾರ್ಯಕ್ರಮ, ಸ್ಪರ್ಧೆಗಳಲ್ಲಿ ಭಾಗವಹಿಸಿದ ಸಾಧನೆ
  • ಸಂಗೀತ ವಿಭಾಗದಲ್ಲಿ ರಾಜ್ಯ ರತ್ನ ಪ್ರಶಸ್ತಿ

ಇನ್ನು ಚಿಕ್ಕಂದಿನಿಂದ ಓದಿನ ಜೊತೆ ಜೊತೆಗೆ ಕ್ರೀಡೆಯಲ್ಲೂ ಹೆಚ್ಚು ಆಸಕ್ತಿ ಹೊಂದಿದ್ದ ತಮಗೂ ಕೂಡ ರಾಜ್ಯ ರತ್ನ ಪ್ರಶಸ್ತಿ ಲಭ್ಯವಾಗಿದೆ. ಸದ್ಯ ಬ್ಯೂಟಿಶಿಯನ್ ಕೋರ್ಸ್ ಪೂರ್ಣಗೊಳಿಸಿದ್ದೇನೆ. ಬೆಂಗಳೂರಿನ ದಿ ಕ್ಯಾಪಿಟಲ್ ಸ್ಟಾರ್ ಹೋಟೆಲ್‌ನಲ್ಲಿ ಇತ್ತೀಚಿಗೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜ್ಯ ರತ್ನ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಗಿದೆ ಎಂದು ನಾಗವೇಣಿ ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

Related Articles

Back to top button