Important
Trending

ಉದ್ಯೋಗ ಮೇಳ: ಯಾರೆಲ್ಲ ಭಾಗವಹಿಸಬಹುದು ನೋಡಿ?

ಯೋಜನಾ ಉದ್ಯೋಗ ವಿನಿಮಯ ಕಛೇರಿ ವತಿಯಿಂದ ಆಗಸ್ಟ್ 20 ರಂದು ಆಯೋಜನೆ

ಕಾರವಾರ: ಆಗಸ್ಟ್ 20ರಂದು ಬೆಳಗ್ಗೆ 10.30 ರಿಂದ 1.30 ಗಂಟೆಯವರೆಗೆ ಇಲ್ಲಿನ ಸ್ಥಳೀಯ ಯೋಜನಾ ಉದ್ಯೋಗ ವಿನಿಮಯ ಕಛೇರಿ ವತಿಯಿಂದ ಮಿನಿ ಉದ್ಯೋಗ ಮೇಳ ಏರ್ಪಡಿಸಲಾಗಿದೆ. ಮಿನಿ ಉದ್ಯೋಗಮೇಳದಲ್ಲಿ 4 ರಿಂದ 5 ಕಂಪನಿಗಳು ಭಾಗವಹಿಸಲಿವೆ. ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಬಿ.ಎ, ಬಿ.ಕಾಂ, ಬಿಎಸ್‌ಸಿ, ಎಮ್.ಕಾಂ, ಎಮ್.ಬಿ.ಎ, ಎಮ್.ಎಸ್.ಡಬ್ಲು, ಡಿಗ್ರಿ ಹಾಗೂ ಸ್ನಾತಕೋತ್ತರ ಪದವಿ ಪೂರೈಸಿದ ಅಭ್ಯರ್ಥಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ.

ಇದನ್ನೂ ಓದಿ: ಇಲ್ಲಿದೆ ಉದ್ಯೋಗಾವಕಾಶ: ಇಂದೇ ಸಂಪರ್ಕಿಸಿ

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಸಂಖ್ಯೆಗೆ ಸಂಪರ್ಕಿಸಿ

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕನಿಷ್ಟ 4 ಸ್ವವಿವರ ಪ್ರತಿಯೊಂದಿಗೆ ಭಾಗವಹಿಸಬೇಕೆಂದು ಮಾಹಿತಿ ನೀಡಲಾಗಿದೆ. ಹೆಚ್ಚಿನ ಮಾಹಿತಿಗಳಿಗಾಗಿ ಈ ಕಛೇರಿ ಅಥವಾ ಮೊಬೈಲ್ ಸಂಖ್ಯೆ 8310044796, 9743360656ಗೆ ಅಥವಾ ಕಛೇರಿ ದೂರವಾಣಿ ಸಂಖ್ಯೆ: 08382-226386ಗೆ ಸಂಪರ್ಕಿಸಬಹುದು. ಕಾರವಾರ ಯೋಜನಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

Back to top button