Follow Us On

WhatsApp Group
Focus News
Trending

ಇಂಗ್ಲೀಷ್ ಸ್ಕೂಲ್ ನಲ್ಲಿ ಬಯಲು ರಂಗಮಂದಿರದ ಉದ್ಘಾಟನೆ ಹಾಗೂ ಸಪೂರ್ವ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ

ಪೂರ್ವವಿದ್ಯಾರ್ಥಿಗಳ ಹಾಗೂ ಆಡಳಿತ ಮಂಡಳಿಯ ಜಂಟಿ ಸಭೆ

ಹೊನ್ನಾವರ: ಸ್ಥಳೀಯ ನ್ಯೂ ಇಂಗ್ಲಿಷ್ ಸ್ಕೂಲ್ ನಲ್ಲಿ ವಿಶಾಲವಾದ ಮತ್ತು ವ್ಯವಸ್ಥಿತವಾದ ರಂಗಮಂದಿರವನ್ನು ಸ್ವಾತಂತ್ರ ಅಮೃತಮಹೋತ್ಸವ ದಿನದಂದು ದಾನಿ ಹಾಗೂ ಶಾಲೆಯ ಪೂರ್ವವಿದ್ಯಾರ್ಥಿ ಕೇಶವ ಶ್ಯಾನಭಾಗ್ ಶ್ರಾಫ್ ಇವರು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಉದ್ಘಾಟಿಸಿದರು.

ಸುಮರು 14 ಲಕ್ಷ ರೂಪಾಯಿಗಳ ಬಯಲು ರಂಗಮoದಿರವನ್ನು ಶಾಲೆಯ ಪೂರ್ವವಿದ್ಯಾರ್ಥಿ ಕೇಶವ ಶ್ಯಾನಭಾಗ್ರವರು ತಮ್ಮ ತಂದೆ ಹಾಗೂ ಶಾಲೆಯ ಸಂಸ್ಥಾಪಕರೂ ಆಗಿರುವ ದಿ. ಎಲ್. ಕೆ, ಶಾನಭಾಗ್ ಶ್ರಾಫ ರವರ ಸ್ಮರಣಾರ್ಥ ವಿದ್ಯಾರ್ಥಿಗಳ ಅನುಕೂಲಕ್ಕೋಸ್ಕರ ಕಟ್ಟಿಸಿಕೊಟ್ಟಿರುತ್ತಾರೆ. ತದ ನಂತರ ನಡೆದ ಪೂರ್ವವಿದ್ಯಾರ್ಥಿಗಳ ಹಾಗೂ ಆಡಳಿತ ಮಂಡಳಿಯ ಜಂಟಿ ಸಭೆಯಲ್ಲಿ ಕೇಶವ ಶ್ಯಾನಭಾಗರವರನ್ನು ಹೃದಯಪೂರ್ವಕವಾಗಿ ಸನ್ಮಾನಿಸಲಾಯಿತು.

ಗ್ರಾಹಕರ ಸೋಗಿನಲ್ಲಿ ಬಂದು ಮೆಡಿಕಲ್ ಶಾಪ್ ನಲ್ಲಿ ಬುರ್ಖಾಧಾರಿ ಮಹಿಳೆಯರ ಕಳ್ಳತನ: ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ನೋಡಿ

ತಮ್ಮ 95ರ ಇಳಿವಯಸ್ಸಿನಲ್ಲಿ ಲವಲವಿಕೆಯಿಂದ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಶಾಲೆಯ ಪೂರ್ವ ವಿದ್ಯಾರ್ಥಿ ಹಾಗೂ ಪಟ್ಟಣದ ವೈದ್ಯರಾದ ಕಿರಣ. ಬಳ್ಕೂರ್, ರವರು ಸಂಸ್ಥೆಯ ಪ್ರಗತಿಯನ್ನು ಪ್ರಶಂಸಿಸಿ ಶಾಲೆಯಲ್ಲಿನ ಕಾರ್ಯಕ್ರಮಗಳಿಗೆ ತಮ್ಮ ಸಹಕಾರ ಸದಾ ಸರ್ವದಾ ಇರುವುದಾಗಿ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ನಾಗರಾಜ ವಹಿಸಿದ್ದರು. ನ್ಯೂ ಎಜ್ಯುಕೇಶನ್ ಸೊಸೈಟಿಯ ಆಧ್ಯಕ್ಷರಾದ ರಘುನಾಥ. ಪೈ ರವರು ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ಶಾಲೆಯ ಪೂರ್ವವಿದ್ಯಾರ್ಥಿಗಳಾದ ವಿನಯ ಪ್ರಭು, ನವೀನ ಶಿರಸಾಟ್‌ರವರ ಜೊತೆಯಲ್ಲಿ ಗುರುರಾಜ ಹೆಗಡೆ, ಹರಿಶ್ಚಂದ್ರ ನಾಯ್ಕ, ಉದಯ ಪ್ರಭುರವರು ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.

ರಾಮಕೃಷ್ಣ ಶಾನಭಾಗ್ ರವರು ಪೂರ್ವ ವಿದ್ಯಾರ್ಥಿ ಸಂಘದ ವರದಿ ವಾಚಿಸಿದರು. ಸಂಸ್ಥೆಯ ಸದಸ್ಯರಾದ ಗಣಪತಿ ಕಾಮತರವರು ಸನ್ಮಾನ ಪತ್ರವನ್ನು ಪ್ರಸ್ತುತಪಡಿಸಿದರು. ಶಿಕ್ಷಕರುಗಳಾದ ಅಶೋಕ ನಾಯ್ಕ ಹಾಗೂ ರಾಘವೇಂದ್ರ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಮುಖ್ಯಾಧ್ಯಾಪಕರೂ ಹಾಗೂ ಪೂರ್ವ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಜಿ. ಟಿ. ಹೆಬ್ಬಾರ ವಂದಿಸಿದರು. ಕಾರ್ಯಕ್ರಮದ ನಂತರ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಪೂರ್ವ ವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿಯಲ್ಲಿ ಹೇಗೆ ಸಹಾಯ ಮಾಡಬಹುದು ಎಂಬುದಕ್ಕೆ ಈ ಕಾರ್ಯಕ್ರಮ ಉತ್ತಮ ಉದಾಹರಣೆಯಾಗಿತ್ತು.

ವಿಸ್ಮಯ ನ್ಯೂಸ್ ಹೊನ್ನಾವರ

Back to top button