
61 ವರ್ಷದ ವೃದ್ಧೆ ಹಾಗೂ 45 ವರ್ಷದ ಪುರುಷ ಸಾವು
ಜಿಲ್ಲೆಯಲ್ಲಿಂದು 76 ಪಾಸಿಟಿವ್
ಭಟ್ಕಳ : ತಾಲೂಕಿನಲ್ಲಿ ಇಂದು ಇಬ್ಬರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದ್ದು, ನಿನ್ನೆ ತಡ ರಾತ್ರಿ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಓರ್ವ ಸಾವನಪ್ಪಿದ್ದರೆ, ಮೊನ್ನೆ ತಡ ರಾತ್ರಿ ಸುಲ್ತಾನ್ ಸ್ಟ್ರೀಟ್ನಲ್ಲಿ ಓರ್ವ ವೃದ್ಧೆ ಸಾವನ್ನಪ್ಪಿದ್ದಾಳೆ. ತಾಲೂಕಿನ ತೆಂಗಿನಗುAಡಿ ಹಬಳೆಯ 45 ವರ್ಷದ ಪುರುಷ ಕಿಡ್ನಿ ಸಮಸ್ಯೆ ಬಳಲುತ್ತಿದ್ದು, ಈತ ಡಯಾಲಿಸಿಸ್ ಪೆಸೆಂಟ್ ಆಗಿದ್ದು ಭಟ್ಕಳ ತಾಲೂಕಾಸ್ಪತ್ರೆಗೆ ದಾಖಲಾಗಿದ್ದ. ನಿನ್ನೆ ತಡರಾತ್ರಿ ವ್ಯಕ್ತಿ ಸಾವನ್ನಪ್ಪಿದ್ದು ತಾಲೂಕಾಡಳಿತ ಗಂಟಲು ದ್ರವ ಮಾದರಿಯನ್ನು ಪರೀಕ್ಷೆ ಕಳುಹಿಸಲಾಗಿದ್ದು, ಇಂದು ವರದಿಯಲ್ಲಿ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಇಂದು ಮೃತ ದೇಹವನ್ನು ಬೆಲ್ನಿಯ ಹಿಂದೂ ರುದ್ರ ಭೂಮಿಯಲ್ಲಿ ತಾಲೂಡಳಿತ ಮತ್ತು ಸಂಬAಧಿಕರೊಳಗೊAಡು ಮುಂಜಾಗ್ರತೆ ಕ್ರಮಗಳಿಂದ ಅಂತ್ಯಕ್ರಿಯೆ ನೆರವೇರಿಸಲಾಯಿತು. ಇನ್ನೋರ್ವ 61 ವರ್ಷದ ವ್ರದ್ದೆ ಮಂಗಳವಾರ ರಾತ್ರಿ ಸುಲ್ತಾನ್ ಸ್ಟ್ರೀಟ್ ನಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿದ್ದು, ನಂತರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆ ಕಳುಹಿಸಲಾಗಿದ್ದು, ಇಂದು ವರದಿಯಲ್ಲಿ ಪಾಸಿಟಿವ್ ಇರುವುದು ಪತ್ತೆಯಾಗಿದೆ.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ
ಜಿಲ್ಲೆಯಲ್ಲಿಂದು 76 ಪಾಸಿಟಿವ್
ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ಕರೊನಾ ಆರ್ಭಟಿಸಿದೆ. ಜಿಲ್ಲೆಯಾದ್ಯಂತ 76 ಮಂದಿಗೆ ಸೋಂಕು ದೃಢಪಟ್ಟಿದೆ. ದಾಂಡೇಲಿ- ಹಳಿಯಾಳ ಭಾಗದಲ್ಲೇ 37 ಜನರಿಗೆ ಸೋಂಕು ಪತ್ತೆಯಾಗಿದೆ. ಉಳಿದಂದತೆ ಯಲ್ಲಾಪುರದಲ್ಲಿ 16, ಶಿರಸಿ 8, ಕುಮಟಾ 6, ಕಾರವಾರ 4, ಮುಂಡಗೋಡದಲ್ಲಿ 3, ಭಟ್ಕಳದಲ್ಲಿ 2 ಪ್ರಕರಣಗಳು ದೃಢಪಟ್ಟಿವೆ. ಯಲ್ಲಾಪುರದಲ್ಲಿ ಸೋಂಕು ದೃಢಪಟ್ಟವರಲ್ಲಿ ಸಾರಿಗೆ ಸಿಬ್ಬಂದಿ ಸೇರಿರುವುದು ಆತಂಕ ಮೂಡಿಸಿದೆ. ಅಲ್ಲದೆ, ಓರ್ವ ತಾಲೂಕು ಆಸ್ಪತ್ರೆಯ ಸಿಬ್ಬಂದಿಯೂ ಸೇರಿದ್ದಾರೆ. ಶಿರಸಿಯಲ್ಲಿ ಎನ್ ಜಿಒನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂವರು ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ.

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)