ಗಮನ ಬೇರೆಡೆ ಸೆಳೆದು ಒಂದುವರೆ ಲಕ್ಷಕ್ಕೂ ಅಧಿಕ ಹಣ ಎಗರಿಸಿದ ಪ್ರಕರಣ: ಆರೋಪಿಯ ಬಂಧನ
ಬಸ್ ಹತ್ತುವ ವೇಳೆ ಗಮನ ಬೇರೆಡೆ ಸೆಳೆದು ದುಷ್ಕೃತ್ಯ
ಕಾರವಾರ: ಬಸ್ ಹತ್ತುವ ವೇಳೆ ಬಟ್ಟೆ ವ್ಯಾಪಾರಿಯ ಗಮನವನ್ನು ಬೇರೆಡೆ ಸೆಳೆದು ಒಂದೂವರೆ ಲಕ್ಷಕ್ಕೂ ಹೆಚ್ಚು ಹಣ ಮತ್ತು ಮೂರು ಚೆಕ್ ಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಉತ್ತರಕನ್ನಡ ಜಿಲ್ಲೆಯ ಮುಂಡಗೋಡ್ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿ ಮೂಲದ ರಾಕೇಶ ಗುಂಜಾಳ ಬಂಧಿತ ಆರೋಪಿ ಎಂದು ತಿಳಿದುಬಂದಿದೆ. ದಾಳಿ ವೇಳೆ ಇನ್ನೊಬ್ಬ ಆರೋಪಿ ಪರಾರಿಯಾಗಿದ್ದು, ಈತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಕಾರಿನಲ್ಲಿ ಬಂದು ಬಾಲಕನನ್ನು ಅಪರಿಸಿದ ದುಷ್ಕರ್ಮಿಗಳು: ಅಂಗಡಿಯಿoದ ಮನೆಗೆ ಬರುತ್ತಿದ್ದಾಗ ರಸ್ತೆಯಲ್ಲೇ ಅಪಹರಣ
ವ್ಯಕ್ತಿಯೊಬ್ಬರು ಮುಂಡಗೋಡ ಬಸ್ ನಿಲ್ದಾಣದಿಂದ ಹುಬ್ಬಳ್ಳಿ ಬಸ್ ಹತ್ತಿದ್ದರು. ಈ ವೇಳೆ ಹಿಂದಿನಿoದ ಮಾಸ್ಕ್ ಹಾಕಿಕೊಂಡು ಬಂದ ವ್ಯಕ್ತಿ ಗಮನ ಬೇರೆಡೆ ಸೆಳೆದು ಬ್ಯಾಗಿನ ಜಿಪ್ ತೆಗೆದು ಅದರಲ್ಲಿದ್ದ ಹಣ ಎಗರಿಸಿದ್ದ. ಬ್ಯಾಗಿನಲ್ಲಿ ಸುಮಾರು ಒಂದುವರೆ ಲಕ್ಷಕ್ಕೂ ಅಧಿಕ ಹಣ ಇತ್ತು. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಅಪಾಯಕಾರಿ ವಿಷ ಪದಾರ್ಥ ಮಾರಾಟಕ್ಕೆ ಯತ್ನಿಸಿದವನ ಬಂಧನ
ಹಳಿಯಾಳ: ಅತೀ ಅಪಾಯಕಾರಿಯಾದ ಜೀವಕ್ಕೆ ಕುತ್ತುತರುವಂತಹ ವಿಷ ಪದಾರ್ಥವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಹಳಿಯಾಳ ಪೋಲಿಸರು ಇದೇ ವೇಳೆ ಬಂಧಿಸಿದ್ದಾರೆ. ಖಚಿತ ಮಾಹಿತಿ ಮೆರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಬಂಧಿತ ಆರೋಪಿ ಪಟ್ಟಣದ ಮಂಜುನಾಥ ಎಮ್ ಎಂದು ತಿಳಿದುಬಂದಿದೆ. ಈತನಿಂದ ತಂಪು ಪಾನಿಯ ಬಾಟಲ್ ಹಾಗೂ ಸಿರೇಂಜ್ ನಲ್ಲಿ ಇದ್ದ ವಿಷ ಪದಾರ್ಥವನ್ನು ವಶಪಡಿಸಿಕೊಳ್ಳಲಾಗಿದೆ.
ವಿಸ್ಮಯ ನ್ಯೂಸ್, ಕಾರವಾರ