ಫಾಸ್ಟ್ ಟ್ಯಾಗ್ ಇಲ್ಲದೆ ಆಗಮಿಸಿದ ಸಾರಿಗೆ ಬಸ್: ಬಸ್ ತಡೆದ ಟೋಲ್ ಸಿಬ್ಬಂದಿ: ಪ್ರಯಾಣಿಕರ ಪರದಾಟ
ಫೋನ್ ಸ್ವಿಚ್ ಆಫ್ ಮಾಡಿದ ಅಧಿಕಾರಿ? ನಿರ್ವಾಹಕರ ಅಸಮಾಧಾನ
ಅಂಕೋಲಾ: ಫಾಸ್ಟ್ ಟ್ಯಾಗ್ ಇಲ್ಲದೇ ಆಗಮಿಸಿದ ಸಾರಿಗೆ ಸಂಸ್ಥೆಯ ಬಸ್ ಹಟ್ಟಿಕೇರಿ ಟೋಲ್ ಗೇಟ್ ಬಳಿ ತಡೆ ಹಿಡಿಯಲ್ಪಟ್ಟು ಪ್ರಯಾಣಿಕರು ಪರದಾಟ ನಡೆಸುವಂತ ಪರಿಸ್ಥಿತಿ ನಿರ್ಮಾಣವಾಯಿತು.
ಸಾರಿಗೆ ಸಂಸ್ಥೆಯ ಬಸ್ಸುಗಳು ಟೋಲ್ ಪಾವತಿಸಲು ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಲಾಗಿದ್ದು ಗದಗ ವಿಭಾಗದ ಗದಗ ಡಿಪೋಗೆ ಸೇರಿದ ಗದಗ ಕಾರವಾರ ಬಸ್ಸಿಗೆ ಪಾಸ್ಟ ಟ್ಯಾಗ್ ಇಲ್ಲದ ಕಾರಣ ಅಂಕೋಲಾ ಹಟ್ಟಿಕೇರಿ ಟೋಲ್ ಸಿಬ್ಬಂದಿಗಳು ಬಸ್ ತಡೆದಿದ್ದು ತಮ್ಮ ಕೈಯಿಂದ ಟೋಲ್ ಕಟ್ಟಲು ಮೇಲಧಿಕಾರಿಗಳಿಗೆ ಕರೆ ಮಾಡಿದರೆ ಗದಗ ಡಿಪೋ ಮ್ಯಾನೇಜರ್ ನಿರ್ಲಕ್ಷ್ಯ ತೋರಿದ್ದಾರೆ, ಎರಡನೇ ಬಾರಿಗೆ ಕರೆ ಮಾಡಿದರೆ ಪೋನ್ ಸ್ವಿಚ್ ಆಫ್ ಮಾಡಿದ ಅಧಿಕಾರಿಯ ವರ್ತನೆ ಕುರಿತು ನಿರ್ವಾಹಕರು ತಮ್ಮ ಬೇಸರ ವ್ಯಕ್ತಪಡಿಸಿದರು.
ಕಾರಿನಲ್ಲಿ ಬಂದು ಬಾಲಕನನ್ನು ಅಪರಿಸಿದ ದುಷ್ಕರ್ಮಿಗಳು: ಅಂಗಡಿಯಿoದ ಮನೆಗೆ ಬರುತ್ತಿದ್ದಾಗ ರಸ್ತೆಯಲ್ಲೇ ಅಪಹರಣ
ಪ್ರಯಾಣಿಕರಿಗೆ ತೊಂದರೆ ಆಗುವುದನ್ನು ಮನಗಂಡು ಕೊನೆಗೆ ನಿರ್ವಾಹಕರೇ ಟೋಲ್ ಕರ ಪಾವತಿಸಿ ಪ್ರಯಾಣ ಮುಂದುವರಿಸಿರುವುದಾಗಿ ತಿಳಿದು ಬಂದಿದೆ.
ವಿಸ್ಮಯ ನ್ಯೂಸ್, ವಿಲಾಸ್ ನಾಯ್ಕ, ಅಂಕೋಲಾ