Follow Us On

WhatsApp Group
Important
Trending

ಬಲೆಯಲ್ಲಿ ಸಿಲುಕಿಕೊಂಡು ಒದ್ದಾಟ ನಡೆಸುತ್ತಿದ್ದ ಪುಟ್ಟ ಮಂಗನ ಮರಿಯ ರಕ್ಷಣೆ: ತಾಯಿ ಮಡಿಲು ಸೇರಿಸಿ ಮಾನವೀಯತೆ

ಅಂಕೋಲಾ: ಕಟ್ಟಡವೊಂದರ ಮೇಲ್ಮಹಡಿಯಲ್ಲಿ ಹಾಕಿದ್ದ ಬಲೆಯಲ್ಲಿ ಸಿಲುಕಿಕೊಂಡು ಅದರಿಂದ ತಪ್ಪಿಸಿಕೊಳ್ಳಲು ಒದ್ದಾಟ ನಡೆಸುತ್ತಿದ್ದ ಪುಟ್ಟ ಮಂಗನ ಮರಿಯೊಂದನ್ನು ಬಲೆಯಿಂದ ಬಿಡಿಸಿ ತಾಯಿ ಮಡಿಲು ಸೇರಿಸುವ ಮೂಲಕ ಪ್ರಾಣಿದಯೆ ತೋರಿದ ಯುವಕರ ಕಾರ್ಯಕ್ಕೆ ಹಲವರಿಂದ ಮೆಚ್ಚುಗೆ ಮಾತು ಕೇಳಿಬಂದಿದೆ.

ಕಾರಿನಲ್ಲಿ ಬಂದು ಬಾಲಕನನ್ನು ಅಪರಿಸಿದ ದುಷ್ಕರ್ಮಿಗಳು: ಅಂಗಡಿಯಿoದ ಮನೆಗೆ ಬರುತ್ತಿದ್ದಾಗ ರಸ್ತೆಯಲ್ಲೇ ಅಪಹರಣ

ಅಂಕೋಲಾ ಪಟ್ಟಣದ ಬಂಡಿಬಜಾರದಲ್ಲಿ ಮಂಗಗಳು ರಸ್ತೆ ಒಂದು ಬದಿಯ ಕಟ್ಟಡಗಳಿಂದ ವಿದ್ಯುತ್ ಸರ್ವಿಸ್ ತಂತಿಗಳ ಮೂಲಕ ಜೋತು ಬಿದ್ದು ಇನ್ನೊಂದು ಬದಿಯ ಕಟ್ಟಡಗಳಿಗೆ ನುಗ್ಗುವುದು ಸಾಮಾನ್ಯವಾಗಿ ಕಂಡು ಬರುತ್ತಲೆ ಇರುತ್ತವೆ.
ಇದೇ ರೀತಿ ಮಂಗಗಳ ಓಡಾಟ ನಡೆಯುತ್ತಿದ್ದ ಸಂದರ್ಭದಲ್ಲಿ ಬಹುಮಹಡಿ ಕಟ್ಟಡಕ್ಕೆ ಕಟ್ಟಲಾದ ಬಲೆಯಲ್ಲಿ ಮಂಗನ ಮರಿ ಒಂದು ಆಕಸ್ಮಿಕವಾಗಿ ಸಿಲುಕಿಕೊಂಡಿದೆ, ಬಲೆಯಿಂದ ಹೊರಬರಲಾಗದ ಮರಿಯ ಆರ್ತನಾದ ಕೇಳಿ ತಾಯಿ ಮಂಗ ಹಾಗೂ ಇತರೆ ಕೆಲ ಮಂಗಗಳು ಬಲೆಯಲ್ಲಿ ಸಿಲುಕಿದ್ದ ಮರಿಯನ್ನು ರಕ್ಷಿಸಲು ಸಾಧ್ಯವಾಗದೇ ಅರಚಲಾರಂಭಿಸಿದೆ.

ಇದನ್ನು ಗಮನಿಸಿದ ಅಕ್ಕ ಪಕ್ಕದ ಅಂಗಡಿಕಾರರು ಏನು ಮಾಡುವುದೆಂದು ಚರ್ಚಿಸತೊಡಗಿದ್ದರೆ, ಅದೇ ಮಾರ್ಗವಾಗಿ ಹೊರಟಿದ್ದ ಕನಸಿಗದ್ದೆಯ ರಜತ ನಾಯ್ಕ ಗಟ್ಟಿ ಧೈರ್ಯ ಮಾಡಿ , ಕಟ್ಟಡವನ್ನೇರಿ ಬಲೆಯನ್ನು ನಿಧಾನವಾಗಿ ಕತ್ತರಿಸಲು ಮುಂದಾಗಿದ್ದಾರೆ. ಆಗಾಗ ತಾಯಿ ಮಂಗ ಹಾಗೂ ಇತರ ಮಂಗಗಳು ಹತ್ತಿರ ಬರುತ್ತಿರುವದೂ ಕಾರ್ಯಾಚರಣೆಗೆ ತೊಡಕಾಗಿತ್ತು. ಆದರೂ ಧೈರ್ಯಗುಂದದ ರಜತ ನಾಯ್ಕ ಹಂತ ಹಂತವಾಗಿ ಬಲೆಯ ಎಳೆಗಳನ್ನು ಕತ್ತರಿಸಿ, ಪುಟ್ಟ ಮಂಗನ ಮರಿಯನ್ನು ಬಲೆಯಿಂದ ಬಿಡಿಸಿ ತಾಯಿ ಮಡಿಲು ಸೇರುವಂತೆ ಮಾಡಿದ್ದಾರೆ. ಸಾಮಾಜಿಕ ಕಾರ್ಯಕರ್ತ ನಿಲೇಶ ನಾಯ್ಕ ಭಾವಿಕೇರಿ ಮತ್ತು ಗೆಳೆಯರು ಹಾಗೂ ಸ್ಥಳೀಯರು ಮತ್ತು ಅಕ್ಕ- ಪಕ್ಕದ ಅಂಗಡಿಕಾರರು ಸಹಕರಿಸಿದರು.

ಕಾರ್ಯಾಚರಣೆ ಸಂದರ್ಭದಲ್ಲಿ ತಾಯಿ ಮಂಗ ತನ್ನ ಪುಟ್ಟ ಮರಿಯನ್ನು ಎತ್ತಿಕೊಂಡು ಹೋಗಲು ಬರುತ್ತಿದ್ದು, ತಾಯಿ ಪ್ರೀತಿಯನ್ನು ಎತ್ತಿ ತೋರಿಸುತ್ತಿತ್ತು.
ಕೆಲವು ಸಮಯಗಳ ಪ್ರಯತ್ನದ ನಂತರ ಯುವಕರು ಮಂಗನ ಮರಿಯನ್ನು ಬಲೆಯಿಂದ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು ತಾಯಿ ಮಂಗ ತನ್ನ ಮರಿಯನ್ನು ಅಪ್ಪಿ ಇತರ ಮಂಗಗಳೊಂದಿಗೆ ತೆರಳಿದೆ.
ಪ್ರಾಣಿದಯೆ ತೋರಿದ ರಜತ, ನಿಲೇಶ ಮತ್ತಿತರರ ಪ್ರಾಣಿದಯಾ ಕಾರ್ಯಕ್ಕೆ ಹಲವರಿಂದ ಮೆಚ್ಚುಗೆ ಮಾತು ಕೇಳಿ ಬಂದಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

Back to top button