ಜಿ.ಪಂ ಸದಸ್ಯರಾದ ಗಜಾನನ ಪೈ ನೇತೃತ್ವದಲ್ಲಿ ಸಭೆ
ಇಂದಿನಿಂದ 10 ದಿನದವರೆಗೆ ಲಾಕ್‌ಡೌನ್
ಕತಗಾಲ: ಎಲ್ಲಾ ಕಡೆ ಕರೊನಾ ಸೋಂಕಿತರ ಸಂಖ್ಯೆ ದಿನ ದಿನ ಹೆಚ್ಚುತ್ತಿರುವ ಕಾರಣದಿಂದಾಗಿ ಈ ಸಮಸ್ಯೆಗೆ ಬ್ರೇಕ್ ಹಾಕುವ ಉದ್ದೇಶದಿಂದ ಅಳಕೋಡ ಪಂಚಾಯತ್ ಆವರಣದಲ್ಲಿ ಜಿಲ್ಲಾ ಪಂಚಾಯತ ಸದಸ್ಯರಾದ ಗಜಾನನ ಪೈ ಅವರ ಮುಂದಾಳತ್ವದಲ್ಲಿ ಸರ್ವಪಕ್ಷ ಮುಖಂಡರು ಹಾಗೂ ಊರಹಿರಿಯರ ನಡುವೆ ಚರ್ಚೆ ನಡೆಯಿತು. ಈ ವೇಳೆ ಜುಲೈ 16 ರಿಂದ ಹತ್ತು ದಿನದವರೆಗೆ ಮುಂಜಾನೆ 06 ಗಂಟೆಯಿಂದ ಮಧ್ಯಾಹ್ನ 02 ಗಂಟೆಯ ವರೆಗೆ ಮಾತ್ರ ಅಂಗಡಿ ಹಾಗೂ ಜನರ ತಿರುಗಾಟಕ್ಕೆ ಅವಕಾಶ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಇನ್ನು 02 ಗಂಟೆಯಿಂದ ಮುಂಜಾನೆಯ 06 ರ ವರೆಗೆ ಲಾಕ್ ಡೌನ್ ಜಾರಿಗೋಳಿಸಲು ನಿರ್ಧರಿಸಲಾಗಿದೆ. ಹಾಗೂ ಅಂಗಡಿ ಮುಂಗಟ್ಟುಗಳು ಪ್ರಾರಂಭವಿರುವAತಹ ಸಮಯದಲ್ಲಿ ಅಂಗಡಿಕಾರರು ಕಡ್ಡಾಯವಾಗಿ ಮಾಸ್ಕ್ ದರಿಸಲೇ ಬೇಕು, ಜೊತೆಗೆ ಗ್ರಾಹಕರಿಗೂ ಮಾಸ್ಕ್ ಧರಿಸಿಕೊಳ್ಳುವಂತೆ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಅಂಗಡಿಕಾರರು ಸೂಚಿಸಬೇಕು. ಮಾಸ್ಕ್ ಹಾಕದಿದ್ದವರಿಗೆ 100 ರೂ ದಂಡ ವಿಧಿಸುವುದಾಗಿಯೂ ನಿರ್ಧರಿಸಲಾಗಿದೆ. ಜೊತೆಗೆ ಅಳಕೋಡ ಸುತ್ತಮುತ್ತಲಿನ ಪ್ರದೇಶದಲ್ಲಿ ಒಂದೆ ಒಂದು ಆ್ಯಂಬುಲೆನ್ಸ್ ಇಲ್ಲದ ಕಾರಣ ಈ ವಿಷಯದ ಕುರಿತು ಶಾಸಕರಿಗೆ ಮನವಿ ಸಲ್ಲಿಸುವ ಕುರಿತಾಗಿ ಇದೇ ವೇಳೆ ಚರ್ಚೆ ನಡೆಸಲಾಯಿತು.
[sliders_pack id=”1487″]