Follow Us On

WhatsApp Group
ಮಾಹಿತಿ
Trending

ಕೆನರಾ ಎಕ್ಸ್ ಲೆನ್ಸ್ ಕೋಚಿಂಗ್ ಸೆಂಟರ್ ವಿದ್ಯಾರ್ಥಿಗಳ ಉತ್ತಮ ಸಾಧನೆ

ಕುಮಟಾ: ಡಾ.ಜಿ.ಜಿ.ಹೆಗಡೆಯವರ ಮಾರ್ಗದರ್ಶನದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ಕೆನರಾ ಎಕ್ಸ್ ಲೆನ್ಸ್ ಕೋಚಿಂಗ್ ಸೆಂಟರ್ ನ ವಿದ್ಯಾರ್ಥಿಗಳು 2019-20ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ
ಉತ್ತಮಸಾಧನೆ ಮಾಡಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳನ್ನು ಕೆನರಾ ಎಕ್ಸ್ ಲೆನ್ಸ್ ಪರವಾಗಿ ಡಾ.ಜಿ.ಜಿ.ಹೆಗಡೆಯವರು ಅಭಿನಂದಿಸಿ, ಶುಭಹಾರೈಸಿದ್ದಾರೆ.

ಕುಮಟಾದ ಪ್ರತಿಷ್ಠಿತ ಕೆನರಾ ಎಕ್ಸ್ ಲೆನ್ಸ್ ಕೋಚಿಂಗ್ ಸೆಂಟರ್ ಕಳೆದ ಮೂರು ವರ್ಷಗಳಿಂದ ಪಿಯುಸಿ ವಿದ್ಯಾರ್ಥಿಗಳಿಗೆ ನೀಟ್, ಸಿಇಟಿ, ಜೆಇಇ ಮತ್ತು ಪಿಯುಸಿ ಮೊದಲನೇಯ ಹಾಗು ಎರಡನೇ ವರ್ಷದ ಬೋರ್ಡ್ ಸಿಲೆಬಸ್‌ಗೆ ಅತ್ಯಂತ ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಕೈಗೆಟಕುವ ದರಲ್ಲಿ ನೀಡುತ್ತಾ ಬಂದಿದೆ. ಈಗ ಕರೊನಾ ಮಾಹಾಮಾರಿ ಹಿನ್ನಲೆಯಲ್ಲಿ ತರಬೇತಿಗಳನ್ನು ನಡೆಸುವುದು ಸಾಧ್ಯವಿಲ್ಲದ ಕಾರಣ ನಮ್ಮ ಸೆಂಟರ್ ವತಿಯಿಂದ ನುರಿತ ಪ್ರಾಧ್ಯಾಪಕರೊಂದಿಗೆ ಆನ್‌ಲೈನ್ ತರಬೇತಿಗಳನ್ನು ನೀಡುವ ವಿಚಾರ ಮಾಡಿರುತ್ತೇವೆ.
ಈ ಆನ್‌ಲೈನ್ ತರಬೇತಿಯು ಜುಲೈ 15 ರಿಂದ ಫಿಝಿಕ್ಸ್, ಕೆಮೆಸ್ಟಿç, ಮೆಥಮೆಟಿಕ್ಸ್ ಮತ್ತು ಬಯಾಲಾಜಿ ವಿಷಯಗಳು ಪ್ರಾರಂಭವಾಗಿ ಈ ಬಾರಿಯ ಅಕಾಡೆಮಿಕ್ ವರ್ಷದ ಒಳಗೆ ಮುಗಿಯುತ್ತದೆ. ಪ್ರತಿ ವಿಷಯ 250 ಗಂಟೆಗಳ ಕಾಲ ನಡೆಯಲಿದೆ.
ಇದರ ಜೊತೆ ಕೋಚಿಂಗ್ ಸೆಂಟರ್‌ನಲ್ಲಿ 8, 9, 10ನೇ ತರಗಿಯ ವಿದ್ಯಾರ್ಥಿಗಳಿಗೆ ಐಐಟಿ ಮತ್ತು ವೈದ್ಯಕೀಯ ಶಿಕ್ಷಣದ ತರಬೇತಿಯನ್ನು ಜುಲೈ 15 ರಿಂದ ಪ್ರಾರಂಭಿಸುತ್ತೇವೆ. ಜಿಲ್ಲೆಯ ಯಾವುದೇ ಕಾಲೇಜು & ಹೈಸ್ಕೂಲಿನ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದು. ಅತ್ಯಂತ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಗುರಿ ಹೊಂದಲಾಗಿದ್ದು, ನೊಂದಾಯಿಸಿಕೊಳ್ಳಬೇಕಾಗಿ ವಿನಂತಿ. ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಯನ್ನು ಕೆನರಾ ಹೆಲ್ತ್ಕೇರ್‌ನ ಡಾ.ಜಿ.ಜಿ.ಹೆಗಡೆಯವನ್ನು ಸಂಪರ್ಕಿಸಿ ಪಡೆಯಬಹುದು.
9448206380, 9482187225, 08386-223580

Back to top button