Important
Trending

ಪ್ರೇಮ ವೈಫಲ್ಯದಿಂದ ಮನನೊಂದು ವಿದ್ಯಾರ್ಥಿ ಸಾವಿಗೆ ಶರಣು: ದ್ವಿತೀಯ ಪಿಯು ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಇನ್ನಿಲ್ಲ

ಉತ್ತಮ ಕ್ರೀಡಾಪಟುವಾಗಿ ಹೆಸರು ಮಾಡಿದ್ದ

ಸಿದ್ದಾಪುರ: ಪ್ರೇಮ ವೈಫಲ್ಯ ಹಾಗೂ ವಿಪರೀತ ತಲೆನೋವಿನಿಂದ ನೊಂದ ವಿದ್ಯಾರ್ಥಿಯೊಬ್ಬ ಸಾವಿಗೆ ಶರಣಾದ ಘಟನೆ ಹಲಸಗಾರನಲ್ಲಿ ನಡೆದಿದೆ. ಜಯಸೂರ್ಯ ಮಂಜುನಾಥ್ ನಾಯ್ಕ (17) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಈತ ತಾಲೂಕಿನ ಕೋಲಶಿರ್ಸಿ ಸರ್ಕಾರಿ ಪಿಯು ಕಾಲೇಜಿನ ದ್ವಿತೀಯ ಪಿಯು ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ. ಅಲ್ಲದೆ, ಉತ್ತಮ ಕ್ರೀಡಾಪಟು ಕೂಡಾ ಆಗಿದ್ದ.

DTH ಸರಿಪಡಿಸುತ್ತಿರುವ ವೇಳೆ ಅವಾಂತರ: ಕಾಲು ಜಾರಿ ಬಿದ್ದು ವ್ಯಕ್ತಿ ಸಾವು

ರವಿವಾರ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಡಿಕೊಂಡಿದ್ದು, ಮನೆಯವರಲ್ಲಿ, ಕುಟುಂಬದವರಲ್ಲಿ ಆಕ್ರಂದನ ಮುಗಿಲುಮುಟ್ಟಿದೆ. ಘಟನೆಗೆ ಸಂಬoಧಿಸಿದoತೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ

Back to top button