DTH ಸರಿಪಡಿಸುತ್ತಿರುವ ವೇಳೆ ಅವಾಂತರ: ಕಾಲು ಜಾರಿ ಬಿದ್ದು ವ್ಯಕ್ತಿ ಸಾವು

3ನೇ ಮಹಡಿಯಲ್ಲಿ ಡಿ.ಟಿ.ಎಚ್ ಸರಿಪಡಿಸುತ್ತಿರುವಾಗ ದುರ್ಘಟನೆ

ಕುಮಟಾ: DTH ಸರಿಪಡಿಸುತ್ತಿರುವ ವೇಳೆ ಆಕಸ್ಮಿಕವಾಗಿ ಆಯತಪ್ಪಿಬಿದ್ದು, ವ್ಯಕ್ತಿ ಸಾವನ್ನಪ್ಪಿದ ಘಟನೆ ಪಟ್ಟಣದಲ್ಲಿ ನಡೆದಿದೆ. ಹೌದು, ಪಟ್ಟಣದ ಕಾಂಪ್ಲೆಕ್ಸ್‌‌ ವೊಂದರ ಮೂರನೇ ಮಹಡಿಯಲ್ಲಿ ಡಿ.ಟಿ.ಎಚ್ ಸರಿಪಡಿಸುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ.

ರಾತ್ರಿ ನಾಟಕದಲ್ಲಿ ಅದ್ಬುತವಾಗಿ ಅಭಿನಯಿಸಿ ಎಲ್ಲರ ಮನಗೆದ್ದಿದ್ದ ವ್ಯಕ್ತಿ ಬೆಳಿಗ್ಗೆ ಹೃದಯಘಾತದಿಂದ ಸಾವು

ಕಾಂಪ್ಲೆಕ್ಸ್‌‌ ವೊಂದರ ಮೂರನೇ ಮಹಡಿಯಲ್ಲಿ ಡಿ.ಟಿ.ಎಚ್ ಸರಿಪಡಿಸುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿದ್ದು, ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ಮೂರನೆಯ ಮಹಡಿಯಿಂದ ಬಿದ್ದು ಅವಘಡ ನಡೆದಿದೆ. ತಾಲೂಕಿನ ಹೆಗಡೆಯ ಪಂಚರಬೇಣದ ದತ್ತಾ ಶಾನಭಾಗ (40) ಮೃತ ದುರ್ದೈವಿ ಎಂದು ತಿಳಿದುಬಂದಿದೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್ ಕುಮಟಾ

Exit mobile version