ಕಾರವಾರ: ಪ್ರಧಾನಮಂತ್ರಿ ನರೇಂದ್ರ ಮೋದಿ, ವಿಶ್ವದ ಅತ್ಯಂತ ಪ್ರಭಾವಶಾಲಿ ನಾಯಕ. ಇವರು ಹೋದಲ್ಲೆಲ್ಲಾ ಏಳುಸುತ್ತಿನ ಭದ್ರತಾ ಕೋಟೆಯೇ ನಿರ್ಮಾಣವಾಗುತ್ತದೆ. ಆದರೆ, ಕಳೆದೊಂದು ವಾರದ ಹಿಂದೆ ನರೇಂದ್ರ ಮೋದಿ ಉತ್ತರಕನ್ನಡಕ್ಕೆ ಆಗಮಿಸಿದ್ದು, ಯಾವುದೇ ಭದ್ರತೆ ಇಲ್ಲದೆ ಓಡಾಡಿಕೊಂಡಿದ್ದಾರೆ! ಗಣೇಶ ವಿಸರ್ಜನೆ ಮೆರವಣಿಗೆಯಲ್ಲೂ ಭಾಗವಹಿಸುತ್ತಿದ್ದಾರೆ!. ಹೌದು, ಇವರು ಜೂನಿಯರ್ ಮೋದಿ. ನೋಡೋಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯಂತೆ ಕಾಣ್ತಾರೆ.
ಆತನ ವಯಸ್ಸು 52, ಯುವತಿಯ ವಯಸ್ಸು 16! ಅಪ್ರಾಪ್ತ ಜೊತೆ ಮದುವೆ: ಮುಂದೇನಾಯ್ತು ನೋಡಿ?
ಇವರು ಹೆಸರು ಸದಾನದಂದ ನಾಯಕ. ಉಡುಪಿ ಜಿಲ್ಲೆಯ ಹಿರಿಯಡ್ಕದವರು.. ಇವರ ವೇಷಭೂಷಣ, ಹಾವಭಾವ, ನಡೆ -ನುಡಿ ಎಲ್ಲವೂ ಸೇಮ್ ಟು ಸೇಮ್ ಮೋದಿಯಂತೆ. ದೂರದಿಂದ ಮಾತ್ರವಲ್ಲ, ಹತ್ತಿರದಿಂದ ನೋಡಿದಾಗ ಕೂಡಾ ಮೋದಿಯಂತೆ ಕಾಣ್ತಾರೆ. ಎಲ್ಲೇ ಹೋದರು ಇವರನ್ನು ನೋಡೋಕೆ ಜನ ಮುಗಿಬೀಳುತ್ತಾರೆ.. ಫೋಟೋ ತೆಗೆಸಿಕೊಳ್ಳೋಕೆ ಮುಂದಾಗುತ್ತಾರoತೆ.
ಯಾರು ಈ ಜೂನಿಯರ್ ಮೋದಿ?
64 ವರ್ಷದ ಸದಾನಂದ ನಾಯಕ ಅಲಿಯಾಸ್ ಜೂನಿಯರ್ ಮೋದಿ ಅವರು ಕುಮಟಾದಲ್ಲಿ ನಡೆದ ಶ್ರೀ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಅಲ್ಲದೆ, ಶಿರಸಿ ನಗರದ ದೇವಿಕೆರೆ ಪ್ರದೇಶದಲ್ಲಿ ಪ್ರತಿಷ್ಠಾಪಿಸಿದ ಗಣೇಶ ವಿಸರ್ಜನೆ ಮೆರಣಿಗೆಯಲ್ಲೂ ಪಾಲ್ಗೊಂಡು ಗಮನಸೆಳೆದರು. ಶಿರಸಿಗೆ ತೆರಳಿದ ವೇಳೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಜೊತೆ ಮಾತುಕತೆ ನಡೆಸಿದರು. ಕುಮಟಾಕ್ಕೆ ಬಂದಿದ್ದ ವೇಳೆ ಶಾಸಕ ದಿನಕರ ಶೆಟ್ಟಿ ಅವರ ಮನೆಗೆ ತೆರಳಿದ್ದರು. ಶಾಸಕ ದಿನಕರ ಶೆಟ್ಟಿಯವರು ಶಾಲು ಹೊದೆಸಿ ಸನ್ಮಾನಿಸಿ, ಗೌರವಿಸಿದರು.
ಮೋದಿಯಂತೆ ಹೋಲುವ ಈ ವ್ಯಕ್ತಿ ಬಿಜೆಪಿಯ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮ ಒಂoದಕ್ಕೆ ದೆಹಲಿಗೆ ಹೋಗಿದ್ದಂತೆ. ಈ ವೇಳೆ ನರೇಂದ್ರ ಮೋದಿ, ರಾಜನಾಥ ಸಿಂಗ್ ಎಲ್ಲರೂ ಇದ್ದರು. ಮೋದಿ ಇವರನ್ನು ನೋಡಿ ಮಾತಾಡಿಸಿದ್ದಂತೆ. ಒಟ್ಟಿನಲ್ಲಿ ಮೋದಿಯ ಹೋಲಿಕೆಯನ್ನೇ ಉತ್ತಮವಾಗಿ ಬಳಸಿಕೊಂಡು ಅವರ ವೇಷಭೂಷಣ, ಹಾವಭಾವ ಕರಗತ ಮಾಡಿಕೊಂಡು, ಇದೀಗ ಎಲ್ಲರ ಗಮನಸೆಳೆಯುತ್ತಿದ್ದಾರೆ ಈ ಜೂನಿಯರ್ ನರೇಂದ್ರ ಮೋದಿ.
ವಿಸ್ಮಯ ನ್ಯೂಸ್, ಕುಮಟಾ