ಆತನ ವಯಸ್ಸು 52, ಯುವತಿಯ ವಯಸ್ಸು 16! ಅಪ್ರಾಪ್ತ ಜೊತೆ ಮದುವೆ: ಮುಂದೇನಾಯ್ತು ನೋಡಿ?

ಕಾರವಾರ: ಆತನ ವಯಸ್ಸು 52,, ಮದುವೆಯಾಗಲು ಹೊರಟ ಯುವತಿಯ ವಯಸ್ಸು 16… ಹೌದು, ನಗರದ 52 ವರ್ಷದ ಸೆಕ್ಯೂರಿಟಿ ಗಾರ್ಡ್ ಒಬ್ಬ 16 ವರ್ಷದ ಅಪ್ರಾಪ್ತ ಹುಡುಗಿಯನ್ನು ವರಿಸಲು ಹೊರಟಿದ್ದ. ಈ ಮದುವೆ ಕುರಿತು ಅಂಗನವಾಡಿ ಕಾರ್ಯಕರ್ತೆಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಇದೀಗ ಮದುವೆಯಾಗಲು ಹೊರಟ ಸೆಕ್ಯೂರಿಟಿ ಗಾರ್ಡ್ ನನ್ನು ಬಂಧಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಕಂದಕ: ಬಾಯ್ತೆರೆದು ಅಪಾಯಕ್ಕೆ ಕಾದಿರುವ ರಸ್ತೆ: ವಾಹನ ಸವಾರರಿಗೆ ಎಚ್ಚರಿಕೆ

ಆದರೆ, ಆತನಿಗೆ ಈ ಕುರಿತು ಕಾನೂನಿನ ಅರಿವಿಲ್ಲ ಎನ್ನಲಾಗಿದ್ದು, ಬಂಧನಕ್ಕೊಳಗಾಗುವ ಭಯದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಇದೀಗ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಜಿಲ್ಲಾ ಕಾರಾಗೃಹಕ್ಕೆ ಸೇರಿಸಲಾಗಿದೆ. ವಧು-ವರರು ಇಬ್ಬರೂ ಕಾರವಾರ ನಗರದವರೇ ಆಗಿದ್ದಾರೆ. ಮಾಲಾದೇವಿ ಮೈದಾನದ ವಿಠೋಬ ದೇವಸ್ಥಾನದಲ್ಲಿ ಮದುವೆ ಅಪಾರ ಸಾರ್ವಜನಿಕರ, ಬಂಧು ಬಳಗದವರ ನಡುವೆಯೇ ನಡೆದಿತ್ತು ಎನ್ನಲಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

Exit mobile version