Focus NewsImportant
Trending

ಮಲಗಿದ್ದ ವೇಳೆಯೇ ಮನೆಯ ಮೇಲೆ ಬಿದ್ದ ನೂರಾರು ವರ್ಷಗಳ ಹಿಂದಿನ ಮರ: ಇಬ್ಬರಿಗೆ ಗಾಯ ಅಪಾಯದಿಂದ ಪಾರಾದ ಮನೆಯವರು

ಶಿರಸಿ: ನೂರಾರು ವರ್ಷಗಳ ಹಿಂದಿನ ಮರವೊಂದು ಬಡುಸಮೇತ ಕಿತ್ತು ಮನೆಯೊಂದರ ಮೇಲೆ ಬಿದ್ದು, ಮನೆ ಸಂಪೂರ್ಣ ಜಖಂ ಗೊಂಡು ವಾಸವಿದ್ದ ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾದ ಘಟನೆ ಶಿರಸಿ ತಾಲೂಕಿನ ಹಳ್ಳಿ ಕಾನಿನಲ್ಲಿ ನಡೆದಿದೆ. ಎಲ್ಲರೂ ಹಬ್ಬದ ವಾತವರಣದಲ್ಲಿ ಮಲಗಿದ್ದ ಸಂದರ್ಭದಲ್ಲಿ ಹತ್ತಾರು ವರ್ಷಗಳಿಂದ ಮನೆಯ ಹಿಂಬದಿಯಲ್ಲಿ ಒಣಗಿ ನಿಂತಿದ್ದ ಮರ ಬುಡಸಮೇತ ಮನೆಯ ಮೇಲೆ ಬಿದ್ದಿದೆ. ಭಯಾನಕ ಶಬ್ದ ಕೇಳಿ ಗ್ರಾಮಸ್ಥರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಘಟನೆಯಲ್ಲಿ 10 ಲಕ್ಷ ನಷ್ಟ ಆಗಿರಬಹುದು ಎಂದು ಅಂದಾಜಿಸಲಾಗಿದೆ.

ರಸ್ತೆಯ ಮೇಲೆ ಸಿಕ್ಕಿತ್ತು ಹಣ, ಮೊಬೈಲ್ ಇದ್ದ ಪರ್ಸ್: ಪೊಲೀಸ್ ಠಾಣಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಯುವಕ

ಕುಳವೆ ಗ್ರಾಮ ಪಂಚಾಯತ ವ್ಯಾಪ್ತಿಗೆ ಬರುವ ಹಳ್ಳಿಕಾನ ವಾಸು ನಾಯ್ಕ ಎಂಬುವರಿಗೆ ಸೇರಿದ ಮನೆ ಇದಾವಿದ್ದು, ಇಲ್ಲಿ ಎರಡು ಕುಟುಂಬದಿoದ ಆರು ಜನರು ವಾಸವಿದದರು. ವಾಸು ಅವರ ಅಣ್ಣ ಹೆಂಡತಿ ಮನೆಯ ಇನ್ನೊಂದು ಮಾಳಿಗೆಯಲ್ಲಿ ವಾಸಿದ್ದು, ಅವರ ಮಗನ ತಲೆಗೆ ಪೆಟ್ಟು ಬಿದ್ದು, ಹೊಲಿಗೆ ಹಾಕಲಾಗಿದೆ. ಇನ್ನು ವಾಸು ಅವರ ಪತ್ನಿ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ತಕ್ಷಣ ಗ್ರಾಮಸ್ಥರು ಗಾಯಾಳುಗಳನ್ನು ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಘಟನಾ ಸ್ಥಳಕ್ಕೆ ಕುಳವೆ ಗ್ರಾಪಂ ಅಧ್ಯಕ್ಷ ವಿನಯ ಭಟ್, ಸದಸ್ಯ ಸಂದೇಶ ಭಟ್ ಬೆಳಖಂಡ, ಗ್ರಾಮ ಲೆಕ್ಕಾಧಿಕಾರಿ ಸೌಮ್ಯ ಶೇಟ್, ಗ್ರಾಮ ಸಹಾಯಕ ನಾರಾಯಣ ನಾಯ್ಕ, ಗ್ರಾಪಂ ಸಿಬ್ಬಂದಿ ರವಿ ಪಟಗಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Maneya mēle bidda nūrāru varṣagaḷa hindina mara: Ibbarige gāya: Apāyadinda pārāda maneyavaru śirasi: Nūrāru varṣagaḷa hindina maravondu baḍusamēta kittu maneyondara mēle biddu, mane sampūrṇa jakhaṁ goṇḍu vāsavidda ibbarige saṇṇa puṭṭa gāyagaḷāda ghaṭane śirasi tālūkina haḷḷi kāninalli naḍedide. Ellarū habbada vātavaraṇadalli malagidda sandarbhadalli hattāru varṣagaḷinda maneya himbadiyalli oṇagi nintidda mara buḍasamēta maneya mēle biddide. Hundreds of years old tree

ವಾಸು ನಾಯ್ಕ ಮತ್ತು ಅವರ ಅತ್ತಿಗೆ ಇರುವ ಸ್ವಲ್ಪ ಗದ್ದೆಯಲ್ಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಇಲ್ಲಿ ಅತ್ತಿಗೆ ಮಗ ಸ್ವಲ್ಪ ಮಂದಜೀವಿಯೂ ಆಗಿದ್ದಾನೆ. ಕಾರಣ ಒಮ್ಮೆಲೆ ಹಣ ತರುವುದು ಕಷ್ಟವಾಗಿದೆ. ಅಲ್ಲದೇ ಪ್ರಕೃತಿ ವಿಕೋಪದ ಅಡಿಯಲ್ಲಿ ಅನುದಾನ ಬಂದರೂ ಅದು ಸಾಕಾಗುವುದಿಲ್ಲ. ಕಾರಣ ದಾನಿಗಳು ಸಹಕಾರ ಮಾಡಬೇಕಾಗಿ ಸದಸ್ಯ ಸಂದೇಶ ಭಟ್ ಬೆಳಖಂಡ ವಿನಂತಿಸಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

Back to top button