Focus NewsImportant
Trending

ಅರಣ್ಯ ಅಧಿಕಾರಿ ಮೇಲೆ ಹಲ್ಲೆ  ನಡೆಸಿ ಜೀವ ಬೆದರಿಕೆ: ಪ್ರಕರಣ ದಾಖಲು: ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ

ಅರಣ್ಯಪ್ರದೇಶದಲ್ಲಿ ಗಿಡ ಕಡಿಯುವುದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ

ಅಂಕೋಲಾ: ಮೀಸಲು ಅರಣ್ಯ ಪ್ರದೇಶದಲ್ಲಿ ಗಿಡಗಳನ್ನು ಕಡಿಯುವುದನ್ನು ಪ್ರಶ್ನಿಸಿದ ಉಪ ವಲಯ ಅರಣ್ಯಾಧಿಕಾರಿ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ತಾಲೂಕಿನ ಮೊರಳ್ಳಿ ಗುಂಡಬಾಳದಲ್ಲಿ ನಡೆದಿದೆ.  ಮೊರಳ್ಳಿ ನಿವಾಸಿ ರಾಮಾ ಜಟ್ಟಿ ಮಡಿವಾಳ ಅರಣ್ಯ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಆರೋಪಿ.

ತಿಥಿ ಕಾರ್ಯ ನಡೆಯುತ್ತಿದ್ದ ಮನೆಯೊಂದರಲ್ಲಿ ಗ್ಯಾಸ್ ಸೋರಿಕೆ : ಮನೆಗೆ ಬೆಂಕಿಬಿದ್ದು ಹಾನಿ

ಈತ ಗುಂಡಬಾಳದ ಮೀಸಲು ಅರಣ್ಯ ಪ್ರದೇಶದಲ್ಲಿ ಈ ಹಿಂದೆ ಸಹ ಗಿಡಗಳನ್ನು ಕಡಿಯುವ ಕೃತ್ಯ ನಡೆಸುತ್ತಿದ್ದಾಗ ಅರಣ್ಯ ಇಲಾಖೆ ವತಿಯಿಂದ  ಎಚ್ಚರಿಕೆ ನೀಡಲಾಗಿತ್ತು. ಈಗ ಮತ್ತೆ ಗಿಡಗಂಟಿಗಳನ್ಪು ಕತ್ತರಿಸುತ್ತಿದ್ದ ಸಂದರ್ಭದಲ್ಲಿ ಗುಂಡಬಾಳ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಸತೀಶ ಸೂರ್ಯಕಾಂತ ಕಾಂಬಳೆ ಎನ್ನುವವರು ಅರಣ್ಯ ಪ್ರದೇಶದಲ್ಲಿ ಗಿಡಗಳನ್ನು ಕತ್ತರಿಸಬಾರದು ಎಂದು ಹೇಳಿ, ಕತ್ತಿಯನ್ನು ಕಸಿದುಕೊಂಡ ಸಂದರ್ಭದಲ್ಲಿ ಆರೋಪಿತನು ಕರ್ತವ್ಯ ನಿರತ ಅರಣ್ಯ ಇಲಾಖೆ ಅಧಿಕಾರಿಯ ವಿಸಲ್ ಗಾರ್ಡ್ ಎಳೆದಾಡಿ ,ಅಧಿಕಾರಿಯನ್ನು ನೆಲದ ಮೇಲೆ ಕೆಡವಿ ಹಲ್ಲೆ ನಡೆಸಿದ್ದಾನೆ.

ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪಿತನು ನಾನು ಏನೂ ಬೇಕಾದರೂ ಮಾಡುತ್ತೇನೆ, ಇನ್ನೂ ಮುಂದೆ ತನ್ನ ತಂಟೆಗೆ ಬಂದರೆ ಒಂದು ಗತಿ ತೋರಿಸುವುದಾಗಿ ಉಪ ವಲಯ ಅರಣ್ಯಾಧಿಕಾರಿಗೆ ಜೀವ ಬೆದರಿಕೆ ಹಾಕಿದ್ದು ಈ ಕುರಿತಂತೆ ಉಪ ವಲಯ ಅರಣ್ಯಾಧಿಕಾರಿ ಸತೀಶ ಕಾಂಬಳೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ  ದೂರು ದಾಖಲಿಸಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button