ಭಟ್ಕಳ: ತಂದೆಯ ತಿಥಿ ಕಾರ್ಯ ನಡೆಯುತ್ತಿದ್ದ ಮನೆಯೊಂದರಲ್ಲಿ ಆಕಸ್ಮಿಕವಾಗಿ ಗ್ಯಾಸ್ ಸಿಲೆಂಡರ್ ಸೋರಿಕೆಯಾಗಿ ಬೆಂಕಿ ತಗುಲಿದ ಘಟನೆ ಶಿರಾಲಿ ತಟ್ಟಿಹಕ್ಕಲಿನಲ್ಲಿ ನಡೆದಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಮನೆಯಲ್ಲಿದ್ದವರೆಲ್ಲ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವೆಂಕಟೇಶ ಲಕ್ಷ್ಮೀನಾರಾಯಣ ಶಾನಭಾಗ ಎನ್ನುವವರ ಮನೆಯಲ್ಲಿ ಗ್ಯಾಸ್ ಸಿಲೆಂಡರ್ ಸೋರಿಕೆಯಾಗಿದೆ. ಇವರ ಮನೆಯಲ್ಲಿ ತಂದೆ ಕಾರ್ಯ ಹಿನ್ನೆಲೆ ಅಡುಗೆ ಮಾಡುತ್ತಿದ್ದ ವೇಳೆ ಗ್ಯಾಸ್ ಸಿಲೆಂಡರ್ ಆಫ್ ಮಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಏಕಾಏಕಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ತಗುಲಿದೆ ಎನ್ನಲಾಗಿದೆ.
ಮೀನುಗಾರಿಕೆ ತೆರಳಿದ ವೇಳೆ ದೋಣಿ ಮುಳುಗಡೆಯಾಗಿ ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ
ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಮನೆಯಲ್ಲಿದ್ದವರ ರಕ್ಷಣೆ ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸ್ ಗ್ರಾಮೀಣ ಠಾಣೆಯ ಪಿ.ಎಸ್.ಐ ಭರತ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಎಸ್ ರಮೇಶ, ಮನೋಜ ಬಾಡ್ಕರ್, ನಾರಾಯಣ ಪಟಗಾರ, ಕುಮಾರ ನಾಯ್ಕ, ಪುರುಸೊತ್ತಮ ನಾಯ್ಕ, ಅಕ್ಷಯ ಹಿರೇಮಠ, ಗ್ರಹ ರಕ್ಷಕ ಸಿಬ್ಬಂದಿ ಕುಮಾರ ನಾಯ್ಕ ಮತ್ತು ಮಂಜು ಶೇಟ್ ಉಪಸ್ಥಿತರಿದ್ದರು.