Follow Us On

WhatsApp Group
Important
Trending

ಮೀನುಗಾರಿಕೆ ತೆರಳಿದ ವೇಳೆ ದೋಣಿ ಮುಳುಗಡೆಯಾಗಿ ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

ಕಳೆದ ಆಗಸ್ಟ್ 28 ರಂದು ಮೀನುಗಾರಿಕೆಗೆ ತೆರಳಿದ ವೇಳೆ ನಾಪತ್ತೆಯಾಗಿದ್ದ

ಭಟ್ಕಳ: ಕಳೆದ ಆಗಸ್ಟ್ 29 ರಂದು ಮೀನುಗಾರಿಕೆ ತೆರಳಿದ ವೇಳೆ ದೋಣಿ ಮುಳುಗಡೆಯಾಗಿ ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಇಂದು ಕಾಗೆ ಗುಡ್ಡದ ಸಮೀಪ ಪತ್ತೆಯಾಗಿದೆ. ನಾಪತ್ತೆಯಾಗಿದ್ದ ನಾಗರಾಜ ಮೃತ ದೇಹಕ್ಕಾಗಿ ಮೀನುಗಾರರು ಕಳೆದ ಮೂರ್ನಾಲ್ಕು ದೋಣಿಗಳ ಸಹಾಯದಿಂದ ಶೋಧಕಾರ್ಯ ನಡೆಸುತ್ತಿದ್ದರು. ಆದರೆ ಅಂತಿಮವಾಗಿ ಇಂದು ತಾಲೂಕಿನ ಕಾಗೆ ಗುಡ್ಡದ ದ್ವೀಪದ ಸಮೀಪ ಮೃತ ದೇಹ ತಲುವ ಸ್ಥಿತಿಯಲ್ಲಿ ಪತ್ತೆಯಾಗಿದೆ.

ರಸ್ತೆಯ ಮೇಲೆ ಸಿಕ್ಕಿತ್ತು ಹಣ, ಮೊಬೈಲ್ ಇದ್ದ ಪರ್ಸ್: ಪೊಲೀಸ್ ಠಾಣಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಯುವಕ

ಕಳೆದ ಆಗಸ್ಟ್ 29 ರಂದು ಜಾಲಿ ಸಮುದ್ರ ತೀರದಿಂದ ಮೀನುಗಾರಿಕೆಗಾಗಿ 3 ಜನ ಮೀನುಗಾರರು ತೆರಳಿದ್ದರು. ಈ ವೇಳೆ ಅಲೆಯ ಹೊಡೆತಕ್ಕೆ ದೋಣಿ ಮುಳುಗಡೆಯಾಗಿದ್ದು, ದೋಣಿಯಲ್ಲಿದ್ದ ಮೂವರಲ್ಲಿ ನಾಗರಾಜ ಮೊಗೇರ ನಾಪತ್ತೆಯಾಗಿದ್ದನು. ಇನ್ನಿಬ್ಬರು ಮುಳುಗಡೆಯಾದ ದೋಣಿಯಿಂದಲೇ ರಕ್ಷಣೆ ಮಾಡಿಕೊಂಡು ದಡ ಸೇರಿ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button