ರಸ್ತೆಯ ಮೇಲೆ ಸಿಕ್ಕಿತ್ತು ಹಣ, ಮೊಬೈಲ್ ಇದ್ದ ಪರ್ಸ್: ಪೊಲೀಸ್ ಠಾಣಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಯುವಕ

ಹೊನ್ನಾವರ: ಯುಕನೊಬ್ಬನಿಗೆ ರಸ್ತೆ ಮಧ್ಯೆ ಮಹಿಳೆಯೊಬ್ಬಳ ಬ್ಯಾಗ್ ದೊರೆತಿದ್ದು, ಇದದಲ್ಲಿ ಹಣ, ಮೊಬೈಲ್, ಎಟಿಎಮ್ ಇತ್ತು. ಈ ಬೆಲೆಬಾಳುವ ಬ್ಯಾಗ್ ಅನ್ನು ನೇರವಾಗಿ ಹೊನ್ನಾವರ ಪೊಲೀಸ್ ಠಾಣಿಗೆ ಆಗಮಿಸಿ ಯುವಕ ನೀಡಿ ಪ್ರಾಮಾಣಿಕತೆ ಮರೆದಿದ್ದಾನೆ. ಕೊನೆಗೆ ಈ ಬ್ಯಾಗ್ ಅನ್ನು ಸಂಬoಧಿಸಿದವರಿಗೆ ನೀಡಲಾಗಿದೆ. ಶಿರಸಿಯ ವತ್ಸಲ ಸುಬ್ಬಯ್ಯ ನಾಯ್ಕ ಎನ್ನುವವರು ಮಗನ ಕಾರಿನಲ್ಲಿ ಆಗಮಿಸುತ್ತಿದ್ದಾಗ ಬ್ಯಾಗ್ ಕಳೆದುಕೊಂಡಿದ್ದರು.

ಕಾವಲುಗಾರನ ಕಟ್ಟಿಹಾಕಿ ಸಹಕಾರಿ ಸಂಘದಲ್ಲಿ ಕಳ್ಳತನಕ್ಕೆ ಯತ್ನ: ಎರಡು ಕಬ್ಬಿಣದ ಕಪಾಟು ಕೊರೆದರ ಕಳ್ಳರು: ಆದರೆ, ಆಗಿದ್ದೇನು?

ಆದರೆ, ಬ್ಯಾಗ್ ಕಳೆದುಕೊಂಡ ವಿಷಯ ಇವರ ಗಮನಕ್ಕೆ ಬಂದಿರಲಿಲ್ಲ. ಆದರೆ, ಮಾರ್ಗದಲ್ಲಿ ತೆರಳುತ್ತಿದ್ದ ಮೂಲತಃ ತಾಲೂಕಿನ ಚಿಕ್ಕನಕೋಡ ಗ್ರಾಮದ ಹಿರೆಬೈಲ್ ನಿವಾಸಿ ಪ್ರಮೋದ ಜಯಂತ ನಾಯ್ಕ ಇವರು ರಸ್ತೆಯಲ್ಲಿ ಬಿದ್ದ ಬ್ಯಾಗ್ ಗಮನಿಸಿದ್ದು, ಕೂಡಲೇ ಪೊಲೀಸ್ ಠಾಣೆಗೆ ನೀಡಿದ್ದಾರೆ. ಪಿಎಸೈ ಸಾವಿತ್ರಿ ನಾಯಕ ಸಂಬoಧಿಸಿದ ಮಹಿಳೆಯನ್ನು ಠಾಣಿಗೆ ಕರೆಯಿಸಿ ಬ್ಯಾಗನ್ನು ಹಸ್ತಾಂತರಿಸಿದರು. ಪ್ರಮೋದ ನಾಯ್ಕ ಇವರ ಪ್ರಾಮಾಣಿಕತೆಗೆ ಸಾರ್ವಜನಿಕರು ಹಾಗೂ ಇಲಾಖೆಯ ಸಿಬ್ಬಂದಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Exit mobile version