Focus News
Trending

ಕಾಳಿ ನದಿ ನೀರು ಸಾಗಿಸುವ ಪ್ರಸ್ತಾಪ: ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಿದ ಮಾಜಿ ಶಾಸಕ ಸುನೀಲ್ ಹೆಗಡೆ

ಜೊಯಿಡಾ: ಉತ್ತರ ಕರ್ನಾಟಕದ 5 ಜಿಲ್ಲೆಗಳಿಗೆ ಕಾಳಿ ನದಿ ನೀರನ್ನು ಸಾಗಿಸುವ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಹಳಿಯಾಳ ಜೊಯಿಡಾ ಮಾಜಿ ಶಾಸಕ ಸುನೀಲ್ ಹೆಗಡೆ, ಬಸವರಾಜ ಬೊಮ್ಮಾಯಿ ಮುಖ್ಯ ಮಂತ್ರಿಗಳು ಕರ್ನಾಟಕ ಸರಕಾರ ಇವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

ಈ ಮನವಿಯಲ್ಲಿ ಮುಖ್ಯಮಂತ್ರಿಗಳಾಗಿ ತಾವು ಮಂಡಿಸಿದ ಪ್ರಸಕ್ತ ವರ್ಷದ ಬಜೆಟನ ಹಲವು ಜನಪರ ಕಾರ್ಯಕ್ರಮಗಳನ್ನು ಅಂತ್ಯಂತ ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೇವೆ. ತಾವು ಮಂಡಿಸಿದ ಬಜೆಟ್ ನಲ್ಲಿ ಕಾಳಿ ನದಿಯಿಂದ ಉತ್ತರ ಕರ್ನಾಟಕದ 5 ಜಿಲ್ಲೆಗಳಿಗೆ ನೀರು ಹರಿಸುವ ಯೋಜನೆಯ ಕುರಿತಂತೆ ನೀರು ಹರಿಸುವ ಕುರಿತಂತೆ ಪ್ರಸ್ತಾಪಿಸಿದ್ದಿರಿ. ಈ ಯೋಜನೆಯಿಂದ ೫ ಜಿಲ್ಲೆಗೆ ಅದೇಷ್ಟರ ಮಟ್ಟಿಗೆ ಲಾಭವಾಗಲಿದೇಯೋ ತಿಳಿಯದು.

ಆದರೆ ಕಾಳಿ ನದಿಯನ್ನು ಅವಲಂಬಿಸಿರುವ ನಮ್ಮ ಭಾಗದ ಜನರಿಗೆ ಹಾಗೂ ಜಿಲ್ಲೆಯ ಕಾಳಿ ನದಿಯ ದಡದ ಜನರಿಗೆ ಸಾಕಷ್ಟು ಬಾಧಕ ಸಂಗತಿಗಳು ಎದುರಾಗಲಿದೆ.

ಜೋಯಿಡಾ ತಾಲೂಕಿನ ಡಿಗ್ಗಿಯಲ್ಲಿ ಜನಿಸಿದ ಕಾಳಿನದಿ ಜೊಯಿಡಾ,ದಾಂಡೇಲಿ,ಯಲ್ಲಾಪುರ,ಕದ್ರಾ ಮಾರ್ಗವಾಗಿ ಕಾರವಾರದಲ್ಲಿ ಸಮುದ್ರ ಸೇರುತ್ತದೆ. ತನ್ನ ಹರಿಯುವಿಕೆಯಲ್ಲಿ (ಕೇವಲ 169 ಕಿ.ಮಿ) ಅತ್ಯಂತ ಚಿಕ್ಕ ನದಿಯಾಗಿರುವ ಕಾಳಿ ತನ್ನ ಒಡಲೋಳಗೆ 5 ಜಲಾಶಯಗಳನ್ನು, ವಿಧ್ಯುದಾಗಾರಗಳನ್ನು ತುಂಬಿಕೊಂಡಿದೆ.

ಈ ಕಾಳಿ ಯೋಜನೆಗಾಗಿ ಜಮೀನು,ಮನೆ, ಬದುಕು ಕಳೆದುಕೊಂಡ ಜನರು ಜೊಯಿಡಾ,ರಾಮನಗರದ ನಿರಾಶ್ರೀತ ಕೇಂದ್ರದಲ್ಲಿದ್ದು, ಇಂದಿಗೂ ಕುಡಿಯಲು ನೀರಿಗಾಗಿ ಬಳಲುವಂತಾಗಿದೆ. ಕೃಷಿ ಜಮೀನಿಗೆ ಸಮರ್ಪಕ ನಿರಾವರಿ ಇಲ್ಲದೆ ಸೊರಗುವಂತಾಗಿದೆ. ದೇಶಕ್ಕೆ ಬೇಳಕು ನೀಡಿದ ಜನರು ಇಂದಿಗೂ ಕತ್ತಲೆಯಲ್ಲಿದ್ದಾರೆ.

ಹೀಗಾಗಿ ಇಲ್ಲಿನ ಜನರಿಗೆ ಮೂಲ ಸೌಕರ್ಯಗಳನ್ನು ನೀಡದೆ ಇಲ್ಲಿನ ನೈಸರ್ಗಿಕ ಜಲ ಸಂಪತ್ತನ್ನು ಬೇರೆ ಜಿಲ್ಲೆಗೆ ಸಾಗಿಸುವುದು ಈ ಭಾಗದ ಜನರ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವಂತಾಗುತ್ತದೆ. ಕಾಳಿ ನದಿ ಈ ಭಾಗದ ಪ್ರವಾಸೋಧ್ಯಮಕ್ಕೋಮದು ಬೆನ್ನೆಲುಬಿನಂತಾಗಿದೆ. ಈ ಕಾಳಿ ನದಿಯಲ್ಲಿ ಇಡಿ ವಿಶ್ವವನ್ನು ಆಕರ್ಷಿಸುವಂತಹ ರಾಪ್ಟಿಂಗ್ ,ಜಲಸಾಹಸ ಕ್ರೀಡೆ ನಡೆಯುತ್ತಿದೆ. ಹಾಗಾಗಿ ಈ ಕ್ಷೇತ್ರದ ಜನರ ಭಾವನೆಗೆ ವಿರುದ್ದವಾಗಿ ನಾವು ಇರಲು ಸಾಧ್ಯವಿಲ್ಲ.

ಕಾಳಿ ನದಿಯಿಂದ ಉತ್ತರ ಕರ್ನಾಟಕದ ೫ ಜಿಲ್ಲೆಗಳಿಗೆ ನೀರು ಸಾಗಿಸುವ ಯೋಜನೆಯಿಂದ ಕಾಳಿ ನದಿ ಬರಡಾಗುತ್ತದೆ ಎಂಬ ಆತಂಕವಿದ್ದು,ಇದರಿಂದ ಈ ಭಾಗದ ಜನರ ಸಮಸ್ಸೆಗಳ ಜೊತೆ ಪ್ರಾಣಿ ಪಕ್ಷಿಗಳೂ ಕೂಡಾ ಸಮಸ್ಸೆಯಾಗುವ ಸಾಧ್ಯತೆಯಿದೆ.

ಈ ನದಿಯ ಧಾರಣ ಶಕ್ತಿಯನ್ನು ತಿಳಿಯದೆಯೇ ಅವೈಜ್ಞಾನಿಕವಾಗಿ,ಅಸಮಂಜಸವಾಗಿ ಇರುವಂತಹ ನೀರು ಸಾಗಾಟದ ಪ್ರಸ್ತಾವನೆಯನ್ನು ಈ ಭಾಗದ ಜನರು ಸುತಾರಾಂ ಒಪ್ಪುತ್ತಿಲ್ಲ. ಈ ಬಗ್ಗೆ ಪರಿಸಿಲಿಸಿ ಈ ಯೋಜನೆಯ ಪ್ರಸ್ತಾಪವನ್ನು ಕೈ ಬೀಡಬೇಕು ಎಂದು ಈ ಮನವಿಯಲ್ಲಿ ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್ ಜೋಯ್ಡಾ

Back to top button