Big NewsImportant
Trending

ಜಿಲ್ಲಾಮಟ್ಟದ ಯುವ ಉತ್ಸವ: ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ನೋಂದಣಿ ಅರ್ಜಿ ಆಹ್ವಾನ

ಪ್ರಥಮ ಸ್ಥಾನ ಪಡೆದ ಅಭ್ಯರ್ಥಿಗಳು ರಾಜ್ಯ, ರಾಷ್ಟ್ರಮಟ್ಟಕ್ಕೆ

ಕಾರವಾರ: ಜಿಲ್ಲಾಮಟ್ಟದ ಯುವಉತ್ಸವ-2022 ನ್ನು ಅರ್ಥಪೂರ್ಣವಾಗಿ ಆಚರಿಸುವ ಹಿನ್ನಲೆಯಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆಗಳನ್ನು ಆಯೋಜಿಸಿ ಪ್ರಥಮ ಸ್ಥಾನ ಪಡೆದ ಅಭ್ಯರ್ಥಿಗಳನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ಕಳುಹಿಸುವ ಉದ್ದೇಶದಿಂದ ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ನೋಂದಣಿ ಅರ್ಜಿ ಆಹ್ವಾನಿಸಲಾಗಿದೆ.

ಜೂನಿಯರ್ ನರೇಂದ್ರ ಮೋದಿ: ನೋಡೋಕೆ ಸೇಮ್ ಮೋದಿಯಂತೆ ಕಾಣ್ತಾರೆ ಇವರು!

ಜಿಲ್ಲಾಡಳಿತ ಹಾಗೂ ನೆಹರೂ ಯುವ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಯುವ ಉತ್ಸವ ನಡೆಯಲಿದ್ದು, ಆಸಕ್ತ ಉತ್ತರ ಕನ್ನಡ ಜಿಲ್ಲೆಯ 15 ರಿಂದ 29 ವರ್ಷ ವಯೋಮಿತಿಯ ಯುವ ಜನರು ಜಿಲ್ಲಾ ಹಂತದಲ್ಲಿ ಕೊಟ್ಟ ಈ ಲಿಂಕನ್ನು nammakarwar.com/nykyu22 ಉಪಯೋಗಿಸಿ ಸೆಪ್ಟೆಂಬರ್ 16ರೊಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕೆoದು ಕೋರಲಾಗಿದೆ.

namma karwar

ಸ್ಪರ್ಧೆಯಲ್ಲಿ ಭಾಗವಹಿಸಲು ಸೂಕ್ತ ದಾಖಲೆಗಳಾದ ಆಧಾರ, ನಿವಾಸಿ ಪ್ರಮಾಣ ಪ್ರತ್ರ ಕಡ್ಡಾಯವಾಗಿ ನೀಡಬೇಕು. ಸ್ಪರ್ಧೆಗಳನ್ನು ಸೆಪ್ಟೆಂಬರ್ ತಿಂಗಳ 3ನೇ ವಾರದಲ್ಲಿ ಕಾರವಾರ ಮೆಡಿಕಲ್ ಕಾಲೇಜಲ್ಲಿ ನಡೆಸಲಾಗುವುದು. ಯುವ ಉತ್ಸವ 2022-23ರಲ್ಲಿ ಪೇಂಟಿoಗ್, ಕವನ ಬರೆಯುವ ಹಾಗೂ ಹಾಡುವ, ಮೊಬೈಲ ಫೊಟೋಗ್ರಾಫಿ, ಡಿಕ್ಲಮೇಶನ್(ಭಾಷಣ), ಯುವ ಸಂವಾದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲಿ ಕನ್ನಡ, ಇಂಗ್ಲೀಷ ಮತ್ತು ಹಿಂದಿ ಭಾಷೆಗಳಲ್ಲಿ ಸ್ಪರ್ಧೆಗಳನ್ನು ನಡೆಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಕಾರವಾರ ನೆಹರು ಯುವ ಕೇಂದ್ರದ ದೂರವಾಣಿ ಸಂಖ್ಯೆ 08382-226965, 9449992195 ಗೆ ಸಂಪರ್ಕಿಸಬಹುದಾಗಿದೆ ಎಂದು ಕಾರವಾರ ನೆಹರು ಯುವಕೇಂದ್ರದ ಜಿಲ್ಲಾ ಯುವ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

Back to top button