Important
Trending
ಟೋಲ್ ಗೇಟ್ ಬಳಿ ನಿಂತಿದ್ದ ಹೊಚ್ಚ ಹೊಸ ಲಾರಿ: ರಾತ್ರಿ ಬೆಳಗಾಗುವುದರೊಳಗೆ 5 ಟೈಯರ್ ಕಳಚಿ ಪರಾರಿ: ಕ್ಷಿಪ್ರ ಕಾರ್ಯಾಚರಣೆ ಕೈಗೊಂಡ ಪೋಲೀಸರು
ಕದ್ದ ಟಾಯರ್ ಸಾಗಿಸುತ್ತಿರುವಾಗ ಸಿಕ್ಕಿ ಬಿದ್ದ ಆರೋಪಿತರಾರು ?

ಅಂಕೋಲಾ: ಈ ಹಿಂದೆ ಅಂಬುಲೆನ್ಸ್ ಅಪಘಾತದಿಂದ ಸುದ್ದಿಯಾಗಿದ್ದ ಬೈಂದೂರು ವ್ಯಾಪ್ತಿಯ ಶಿರೂರು ಟೋಲ್ ಗೇಟ್ ಮತ್ತೆ ಸುದ್ದಿ ಆಗುವಂತಾಗಿದೆ. ಟೋಲ್ ಗೇಟ್ ಬಳಿ ನಿಲ್ಲಿಸಲಾಗಿದ್ದ ಹೊಸ ಲಾರಿಯ, 5 ಟಯರ್ ಗಳನ್ನು ರಾತ್ರಿ ಬೆಳಗಾಗುವುದರೊಳಗೆ ಕಳಚಿದ್ದ ಕಳ್ಳರು ,ಕಳ್ಳತನ ಮಾಡಿ ಸ್ಥಳದಿಂದ ಪರಾರಿಯಾಗಿದ್ದರು. ಟಾಯರ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಬೈಂದೂರು ಪೊಲೀಸರು ಮಹಾರಾಷ್ಟ್ರದ ಮೂವರು ಆರೋಪಿತರನ್ನು ಬಂಧಿಸಿ ಅವರು ಕಳ್ಳತನ ಮಾಡಿದ ಟಯರುಗಳನ್ನು ವಶಪಡಿಸಿಕೊಂಡಿದ್ದಾರೆ.