Follow Us On

Google News
Big News
Trending

ಜನದಟ್ಟಣೆ ನಿಯಂತ್ರಣಕ್ಕೆ ಮುಂದಾದ ಪೊಲೀಸರು

ಮೊದಲ ದಿನ ಎಚ್ಚರಿಕೆ
ಎಚ್ಚೆತ್ತುಕೊಳ್ಳದಿದ್ರೆ ದಂಡದ ಶಿಕ್ಷೆ

ಅಂಕೋಲಾ: ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಶನಿವಾರ ಉಂಟಾದ ಜನ ದಟ್ಟನೆಯ ಚಿತ್ರಣ ಸಾಮಾಜಿಕ ಜಾಲತಾಣ ಮತ್ತು ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದವು. ಭಾನುವಾರದ ಲಾಕ್‌ಡೌನ್ ಜನಸಂದಣಿಗೆ ಕೊಂಚ ಬ್ರೇಕ್ ನೀಡಿತ್ತಾದರೂ ಸೋಮವಾರ ಮತ್ತೇ ಪೇಟೆಯಲ್ಲಿ ಗೌಜು ಗದ್ದಲ ಕಂಡು ಬರುತ್ತಿದೆ. ಜನಜಂಗುಳಿ ನಿಯಂತ್ರಿಸಲು ನಯವಾದ ಮಾತುಗಳಿಂದ ಸಾಧ್ಯವಿಲ್ಲ ಎಂಬoತೆ ನೇರವಾಗಿ ಕಾರ್ಯಾಚರಣೆಗೆ ಇಳಿದಿರುವ ಪಿ.ಎಸ್.ಐ ಇ.ಸಿ ಸಂಪತ್ ಮತ್ತು ಪೋಲೀಸ್ ಸಿಬ್ಬಂದಿಗಳು, ರಸ್ತೆ ಅತಿಕ್ರಮಿಸಿ ಟೆಂಟ್ ಹೂಡಿ ಬೇಕಾಬಿಟ್ಟಿ ವ್ಯಾಪಾರ ನಡೆಸುವ ಕೆಲವರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.

ಕೋವಿಡ್-19 ಪ್ರಸರಣ ತಡೆಗಾಗಿ ಜಿಲ್ಲಾಡಳಿತದ ನಿರ್ದೇಶನದಲ್ಲಿ ತಾಲೂಕಾಡಳಿತ ಕಾರ್ಯ ಪ್ರವೃತ್ತರಾಗಿದ್ದು ಕೊರೊನಾ ವಾರಿಯರ್ಸ್ನ, ಎಲ್ಲಾ ಅಧಿಕಾರಿಗಳು, ಯೋಧರು ತಾಲೂಕಿನ ಜನತೆಯ ಆರೋಗ್ಯ ಕಾಳಜಿಗೆ ಶ್ರಮಿಸುತ್ತಿದ್ದಾರೆ. ಆದರೆ ಕೆಲ ಸಾರ್ವಜನಿಕರ ನಿಷ್ಕಾಳಜಿಯಿಂದಾಗಿ ಸೋಂಕು ಪ್ರಸರಣ ಸಾಧ್ಯತೆ ಅಪಾಯ ಕಂಡು ಬರುತ್ತಿದೆ. ಪಟ್ಟಣದಲ್ಲಿಯಂತೂ ಕೆಲ ತರಕಾರಿ ಮತ್ತಿತ್ತರ ವ್ಯಾಪಾರಸ್ಥರು ಮುಖ್ಯ ರಸ್ತೆಯನ್ನೇ ಅತಿಕ್ರಮಿಸಿ, ಟೆಂಟ್ ಹೂಡಿ ವ್ಯಾಪಾರ ನಡೆಸುವ ಮೂಲಕ ಸಂಚಾರ ದಟ್ಟನೆಗೆ ಕಾರಣರಾಗಿದ್ದಾರೆ ಎನ್ನಲಾಗಿದೆ.

[sliders_pack id=”1487″]

ಅಂತವರ ಮೇಲೆ ಕಣ್ಣಿಟ್ಟಿರುವ ಪೋಲೀಸ್ ಇಲಾಖೆ, ಕಾರ್ಯಾಚರಣೆ ನಡೆಸಿ ರಸ್ತೆಯಲ್ಲಿ ಬೇಕಾ ಬಿಟ್ಟಿ ವ್ಯಾಪಾರ ನಡೆಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು ಆರಂಭಿಕ ದಿನ ಎಚ್ಚರಿಕೆಯನ್ನಷ್ಟೇ ನೀಡಿದಂತಿದೆ. ಮುಂದಿನ ದಿನಗಳಲ್ಲಿ ಮತ್ತೇ ರಸ್ತೆ ಅತಿಕ್ರಮಿಸಿ ವ್ಯಾಪಾರ ವಹಿವಾಟು ನಡೆಸಿದ್ದು ಕಂಡು ಬಂದಲ್ಲಿ ದಂಡದ ಶಿಕ್ಷೆಗೆ ಗುರಿ ಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಕೋವಿಡ್-19 ವಿರುದ್ಧ ಸೆಣಸಲು ಸತ್ಯಾಗ್ರಹ ಸ್ಮಾರಕ ಭವನದಲ್ಲಿ ಆಯೋಜಿಸಿದ್ದ ಆನ್‌ಲೈನ್ ತರಭೇತಿಯಲ್ಲಿ ಪಾಲ್ಗೊಂಡ ಕಾರಣ ಪುರಸಭೆಯವರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲಾಗಲಿಲ್ಲ ಎಂದು ತಿಳಿದು ಬಂದಿದ್ದು ಮಂಗಳವಾರದಿoದ ಪಟ್ಟಣದಲ್ಲಿ ಜಂಟಿ ಕಾರ್ಯಾಚರಣೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ. ಕೆಲವರು ಮುನ್ನೆಚ್ಚರಿಕೆ ತೆಗೆದುಕೊಳ್ಳದೇ ಬೇಕಾಬಿಟ್ಟಿ ವ್ಯಾಪಾರ ನಡೆಸುತ್ತಿರುವುದು ಅವರಿಂದಾಗಿಯೇ ಕೆಲ ತೊಂದರೆಗಳಾಗುತ್ತಿದ್ದು ಅಂತವರಿಗೆ ಖಡಕ್ ಎಚ್ಚರಿಕೆ ನೀಡಬೇಕಲ್ಲದೇ ಅನಿವಾರ್ಯವಾದರೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆನ್ನುವುದು ಪ್ರಜ್ಞಾವಂತರ ಅನಿಸಿಕೆಯಾಗಿದೆ. ಇದೆ ವೇಳೆ ದಿನ ನಿತ್ಯ ಬುಟ್ಟಿ ಹೊತ್ತು ಬೀದಿ ಬದಿ ವ್ಯಾಪಾರ ಮಾಡಿಯೇ ಕುಟುಂಬ ನಿರ್ವಹಣೆ ಮಾಡಿಕೊಳ್ಳಬೇಕಾದ ರೈತರು, ಮಹಿಳೆಯರು, ಮತ್ತಿತ್ತರ ಬಡ ವ್ಯಾಪಾರಸ್ಥರಿಗೆ ತಿಳಿ ಹೇಳಿ ಅವರ ದೈನಂದಿನ ಜೀವನಕ್ಕೆ ತೊಂದರೆಯಾಗದoತೆ, ಸಾಮಾಜಿಕ ಅಂತರ ಕಾಯ್ದುಕೊಂಡು ಮಾರಾಟ ಮಾಡಲು ಅವಕಾಶ ಕಲ್ಪಿಸಿ ಕೊಡಬೇಕಿದೆ.

ಸಾಮಾಜಿಕ ಪ್ರಜ್ಞೆಯಿಂದ ಸಾರ್ವಜನಿಕರು ಸಹ ಗುಂಪು ಗೂಡದಂತೆ ಎಚ್ಚರಿಕೆ ವಹಿಸಬೇಕಿದ್ದು ಆ ಮೂಲಕ ಆಡಳಿತ ವ್ಯವಸ್ಥೆಗೆ ಸಹಕರಿಸಬೇಕಿದೆ. ಒಟ್ಟಿನಲ್ಲಿ ಅಂಕೋಲಾ ತಾಲೂಕಿನ ಸಾರ್ವಜನಿಕರ ಹಿತ ರಕ್ಷಣೆಯಿಂದ ಎಲ್ಲರೂ ಒಂದಾಗಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749

ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)

Back to top button
Idagunji Mahaganapati Chandavar Hanuman