Important
Trending

ನಡುರಸ್ತೆಯಲ್ಲಿ ದೇಹದಿಂದ ಕತ್ತರಿಸಿದ ಸ್ಥಿತಿಯಲ್ಲಿ ಗೋವಿನ ತಲೆ: ಫೋಟೋ ವೈರಲ್

ಶಿರಸಿ: ನಡುರಸ್ತೆಯಲ್ಲಿ ದೇಹದಿಂದ ಕತ್ತರಿಸಿದ ಸ್ಥಿತಿಯಲ್ಲಿ ಇದ್ದ ಗೋವಿನ ಫೋಟೋವೊಂದು ಇದೀಗ ಎಲ್ಲೆಡೆ ವೈರಲ್‌ ಆಗಿದೆ. ಹೌದು, ತಾಲೂಕಿನ ಹೆಗಡೆಕಟ್ಟಾದಿಂದ ಕಾನಳ್ಳಿ ರಸ್ತೆಗೆ ತೆರಳುವ ನಡುರಸ್ತೆಯಲ್ಲಿ ಈ ದೃಶ್ಯ ಗೋಚರಿಸಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದ್ರೆ, ಈ ವಿಷಯದ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಳ್ಳುತ್ತಿದ್ದು, ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಎಲ್ಲೋ ಗೋವಿನ ತಲೆಯನ್ನು ನಾಯಿಗಳು ತಂದು ಎಸೆದಿರಬಹುದು ಎಂದು ಶಂಕಿಸಲಾಗಿದೆ. ಈ ಘಟನೆ ಗೋಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.

ವಿಸ್ಮಯ ನ್ಯೂಸ್‌, ಶಿರಸಿ

Back to top button