ಕುಮಟಾ: ಮನೆಯೊಂದರ ಬಾವಿಯಲ್ಲಿ ಆಕಸ್ಮಿಕವಾಗಿ ಬಿದ್ದ ಮಹಿಳೆಯನ್ನು ಅಗ್ನಿಶಾಮಕ ದಳ ರಕ್ಷಿಸಿದ ಘಟನೆ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಹಳೆ ಮೀನು ಮಾರುಕಟ್ಟೆಯ 35 ಅಡಿ ಆಳದ ಬಾವಿಯಲ್ಲಿ ಮಹಿಳೆಯೊಬ್ಬಳು ನೀರುತರಲು ಹೋದಾಗ ಆಕಸ್ಮಿಕವಾಗಿ ಬಿದ್ದಿದ್ದಳು. ಮನೆಯವರು ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.
KSRTC ವೋಲ್ವೊ ಬಸ್ ಮತ್ತು ಟೆಂಪೋ ನಡುವೆ ಅಪಘಾತ: 20 ಪ್ರಯಾಣಿಕರಿಗೆ ಗಾಯ
ಪಟ್ಟಣದ ಹಳೇ ಮೀನು ಮಾರುಕಟ್ಟೆಯ ಶೃತಿ ಶಂಕರನ್ ಎಂಬ ಮಹಿಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದ ಮಹಿಳೆ ಎಂದು ತಿಳಿದುಬಂದಿದೆ. ಸಕಾಲಕ್ಕೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡಿಸಿ, ಮಹಿಳೆಯ ಪ್ರಾಣ ರಕ್ಷಿಸಿದ್ದಾರೆ. ಬಳಿಕ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ಕಾರ್ಯಾಚರಣೆಯಲ್ಲಿ ಪ್ರಭಾರಿ ಅಗ್ನಿ ಶಾಮಕ ಠಾಣಾಧಿಕಾರಿ ತಮ್ಮಯ್ಯಗೊಂಡ, ಸಿಬ್ಬಂದಿಯಾದ ರಾಮ ನಾಯ್ಕ, ಸಂದೀಪ ನಾಯಕ, ಜಯಂತ ನಾಯ್ಕ, ನಾಗರಾಜ ಪಟಗಾರ, ಮಹಾಬಲೇಶ್ವರ ಹರಿಕಂತ್ರ, ಮಂಜುನಾಥ ಹೆಗಡೆ, ದಿನೇಶ ಮುಂತಾದವರು ಇದ್ದರು.
ವಿಸ್ಮಯ ನ್ಯೂಸ್, ಕುಮಟಾ