ಜಿಲ್ಲಾ ಪೋಲೀಸ ವಿಶೇಷ ದಳದ ಭರ್ಜರಿ ಕಾರ್ಯಾಚರಣೆ ಅಂಕೋಲಾ: ಮೂರು ಪ್ರತ್ಯೇಕ ವಾಹನಗಳಲ್ಲಿ ಅಕ್ರಮವಾಗಿ ದನದ ಮಾಂಸವನ್ನು ಸಾಗಿಸುತ್ತಿದ್ದ ಜಾಲವನ್ನು ಪತ್ತೆ ಹಚ್ಚಿದ ಜಿಲ್ಲಾ ಪೊಲೀಸರ ವಿಶೇಷ ತಂಡ ಭಾರೀ ಪ್ರಮಾಣದಲ್ಲಿ ಮಾಂಸ ಮತ್ತು ಅಕ್ರಮ ಸಾಗಾಟಕ್ಕೆ ಬಳಸಿದ 3 ವಾಹನಗಗಳನ್ನು ವಶಪಡಿಸಿಕೊಂಡು 5 ಜನರನ್ನು ಬಂಧಿಸಿದ ಘಟನೆ ಜೊಯಿಡಾ ರಾಮನಗರ ಅನಮೋಡ ಚೆಕ್ ಪೋಸ್ಟ್ ಬಳಿ ನಡೆದಿದೆ.
ನೀರು ತರಲು ಹೋದ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದ ಮಹಿಳೆ: ಅಗ್ನಿಶಾಮಕ ಸಿಬ್ಬಂದಿಯ ಯಶಸ್ವಿ ಕಾರ್ಯಾಚರಣೆ
ಅಳ್ನಾವರ -ನೆಹರೂ ನಗರ ನಿವಾಸಿ ಸಾಧಿಕ ಅಬ್ದುಲ್ ಖಾದೀರ ಅತ್ತಾರ (25) ಖಾನಾಪುರ ನಿವಾಸಿ ರಾಜೇಸಾಬ ಜಂಗ್ಲಿಸಾಬ ಹರಗಿ(30)ಅಳ್ನಾವರ ನಿವಾಸಿ ಇಲಿಯಾಸ ಹಜರತ್ ಬಿಲಾಲ (30) ಇಂದಿರಾನಗರ ಅಳ್ನಾವರ ನಿವಾಸಿ ದವಲ ಮಲಿಕ ಮುಕ್ತಿಯಾರ ಅಹ್ಮದ್ (31) ಮತ್ತು ನಂದಗಡ ಖಾನಾಪುರ ನಿವಾಸಿ ಶಾಹೀದ ಗುಡುಸಾಬ ಶಿಂದೋಡಿ (21) ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿತರಿಂದ ಸುಮಾರು 3.11 ಲಕ್ಷ ಮೌಲ್ಯದ 2220 ಕೆ ಜಿ ದನದ ಮಾಂಸ ಮತ್ತು ಅಕ್ರಮವಾಗಿ ಮಾಂಸ ಸಾಗಿಸುತ್ತಿದ್ದ 2 ಲಕ್ಷ ರೂಪಾಯಿ ಮೌಲ್ಯದ ಎರಡು ಮಹಿಂದ್ರ ಬೊಲೆರೋ ವಾಹನ, 1.5 ಲಕ್ಷ ಮೌಲ್ಯದ ಟಾಟಾ ವಾಹನ ಸೇರಿ ಒಟ್ಟು ಸುಮಾರು 6.61 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿತರು ಗೋವಾ ರಾಜ್ಯದಲ್ಲಿ ಮಾರಾಟ ಮಾಡುವ ಉದ್ದೇಶದಿಂದ ದನದ ಮಾಂಸ ಸಾಗಿಸುತ್ತಿದ್ದ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವಿಶೇಷ ವಿಭಾಗದ ಪಿ.ಎಸ್. ಐ ಪ್ರೇಮನಗೌಡ ಪಾಟೀಲ್, ರಾಮನಗರ ಪಿ.ಎಸ್. ಐ ಯಲ್ಲಾಲಿಂಗ ಕನ್ನೂರ್ ಮತ್ತು ಸಿಬ್ಬಂದಿಗಳು ಅನಮೋಡ ಚೆಕ್ ಪೋಸ್ಟ್ ಬಳಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿಯೇ ಅತೀ ಹೆಚ್ಚು (ಭಾರೀ) ಪ್ರಮಾಣದ ದನದ ಮಾಂಸ ಸಾಗಾಟ ಜಾಲ ಪತ್ತೆ ಹಚ್ಚಿದ ಎಸ್ಪಿ ಸ್ಕಾಡ್ ಮತ್ತು ಇತರ ಪೋಲೀಸ್ ತಂಡದ ಜಂಟೀ ಕಾರ್ಯಚರಗೆ ಕುರಿತು ಗೋ ಪ್ರೇಮಿಗಳ ಪರವಾಗಿ ಹಲವೆಡೆಯಿಂದ ಮೆಚ್ಚುಗೆ ಮಾತು ಕೇಳಿ ಬರುತ್ತಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ