Follow Us On

WhatsApp Group
Important
Trending

ಶಿರೂರು ದುರಂತ : 4 ನೇ ದಿನದ ಕಾರ್ಯಾಚರಣೆ ವೇಳೆ 4 ಚಕ್ರಗಳ ಸಮೇತ ಲಾರಿ ಹೌಜಿಂಗ್ ಪತ್ತೆ

ಅಂಕೋಲಾ : ಶಿರೂರು ಗುಡ್ಡ ಕುಸಿತ ದುರಂತಕ್ಕೆ ಸಂಬಂಧಿಸಿದಂತೆ ಗಂಗಾವಳಿ ನದಿಯಲ್ಲಿ ನಡೆಯುತ್ತಿರುವ ಶೋಧ ಕಾರ್ಯಾಚರಣೆಯ 3 ನೇ ಹಂತದ ನಾಲ್ಕನೇ ದಿನವಾದ ಸೋಮವಾರ, ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಬ್ಯಾಗ್, ವಾಯರ್ ಕೇಬಲ್, ಚಿಕ್ಕಪುಟ್ಟ ಇತರೆ ಸಾಮಾಗ್ರಿ ಹಾಗೂ ಅವಶೇಷಗಳು ಪತ್ತೆಯಾಗಿದ್ದವು. ಮಧ್ಯಾಹ್ನದ ಬಿಡುವಿನ ಬಳಿಕ ಮತ್ತೆ ಕಾರ್ಯಚರಣೆ ಮುಂದುವರಿಸಿದಾಗ ವಾಹನವೊಂದರ ನಾಲ್ಕು ಚಕ್ರಗಳುಳ್ಳ ಲಾರಿಯ ಹೌಜಿಂಗ್ ನ ಬಿಡಿಭಾಗ ಪತ್ತೆಯಾಗಿದ್ದು, ಹಿಟಾಚಿ ಮೂಲಕ ಮೇಲೆತ್ತಲಾಗಿದೆ.

ಉದ್ಯೋಗ: ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ ನೇಮಕಾತಿ: ಪದವಿ ಆದವರು ಅರ್ಜಿ ಸಲ್ಲಿಸಿ

ಇದು ಸಹ ಗ್ಯಾಸ್ ಟ್ಯಾಂಕರ್ ನ ಬಿಡಿ ಭಾಗ ಎನ್ನಲಾಗುತ್ತಿದ್ದು, ಈ ಹಿಂದೆ ದೊರೆತಿದ್ದ ಫ್ರಂಟ್ ಎಕ್ಸೆಲ್, ಇಂಜಿನ್ , ಡ್ರೈವರ ಕ್ಯಾಬಿನ್ ಮತ್ತಿತರ ಬಿಡಿ ಭಾಗಗಳೊಂದಿಗೆ ತಾಳೆಯಾಗುತ್ತಿದ್ದು, ಈ ಕುರಿತು ಖಚಿತತೆ ದೊರೆಯಬೇಕಿದೆ. ಈ ಮೂಲಕ ವಾಹನದ ಮುಖ್ಯ ಭಾಗಗಳು ಬಿಡಿ ಬಿಡಿಯಾಗಿ ದೊರೆಯುತ್ತಿರುವದು,ಸ್ಥಳೀಯರ ಊಹೆಯಂತೆ ಏನಾದರೂ ಸ್ಪೋಟ ಸಂಭವಿಸಿರಬಹುದೆಂ ಮಾತಿಗೆ ಪುಷ್ಠಿ ನೀಡುವಂತಿದೆ.

ಆದರೆ ಈ ವರೆಗೂ ಅರ್ಜುನ್ ಮತ್ತು ಆತನ ಬೆಂಜ್ ಲಾರಿ, ಸ್ಥಳೀಯರಾದ ಜಗನ್ನಾಥ ನಾಯ್ಕ , ಲೊಕೇಶ ನಾಯ್ಕ ಕುರಿತು ಯಾವುದೇ ಕುರುಹು ಪತ್ತೆಯಾಗಿಲ್ಲ. ಕಾರ್ಯಾಚರಣೆ ಮತ್ತೆ ಮುಂದುವರೆದಿದ್ದು, ಏನೆಲ್ಲ ಸಿಗಬಹುದು ಕಾದು ನೋಡಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button