Big NewsImportant
Trending

ಕೋಮು ಸೌಹಾರ್ದತೆ ಕೆರಳಿಸುವ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಶಿರಸಿ: ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಸೌಹಾರ್ದತೆ ಕೆರಳಿಸುವ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಮಾರುಕಟ್ಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮರಾಠಿಕೊಪ್ಪದ  ಗೌಸ ಅಜಮ್ ಮಹ್ಮದ ಗೌಸ್ ಶಬ್ಬೀರ್ ಅಹಮ್ಮದ (35) ಹಾಗೂ ಮೆಹಬೂಬ್ ಸಾಬ್ ಹಸನಸಾಬ್ ನಾಗನೂರ ( 27 )  ಬಂಧಿತ ಆರೋಪಿಗಳಾಗಿದ್ದಾರೆ.

Indian Railway Recruitment 2022: 3,115 ಹುದ್ದೆಗಳಿಗೆ ಅರ್ಜಿ ಆಹ್ವಾನ: SSLC ಪಾಸಾದವರು ಅರ್ಜಿ ಸಲ್ಲಿಸಬಹುದು

ಆರೋಪಿಗಳು ಜನರನ್ನ ಕೆರಳಿಸುವಂತೆ  ವಾಟ್ಸಪ್ ಸ್ಟೇಟಸ್ ಗಳನ್ನು ಹಾಕಿ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ತರುವ ಹಾಗೂ ಕೋಮು ಸೌಹಾರ್ಧತೆಗೆ ಧಕ್ಕೆ ತರುವ ಸಂಜ್ಞೆಯ ಅಪರಾಧದ ಸಂಚಿನಲ್ಲಿ ತೊಡಗಿರುವುದರಿಂದ, ಸದ್ರಿಯವರು ಮುಂದೆ ಆಗಬಹುದಾದ ಸಂಜ್ಞೆಯ ಅಪರಾಧಗಳನ್ನು ತಡೆದು ಸಮಾಜದಲ್ಲಿ ಕೋಮು ಸೌಹಾರ್ಧತೆ ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ವಶಕ್ಕೆ ಪಡೆಯಲಾಗೀದೆ. ಎರಡು ಜನ ಆರೋಪಿತರುಗಳನ್ನು ಬಂಧಿಸಿ  ತಾಲೂಕಾ ದಂಡಾಧಿಕಾರಿ ಶಿರಸಿ ರವರ ಮುಂದೆ ಹಾಜರ ಪಡಿಸಿದ್ದರು.  ತಾಲೂಕ  ದಂಡಾಧಿಕಾರಿಗಳು 2 ಜನ ಆರೋಪಿತರುಗಳಿಗೆ  ನ್ಯಾಯಾಂಗ ಬಂಧನವನ್ನು ವಿಧಿಸಿದೆ.

ವಿಸ್ಮಯ ನ್ಯೂಸ್, ಶಿರಸಿ

land for sale

Back to top button