Important
Trending

ದೇವಸ್ಥಾನದಲ್ಲಿ ಕಳುವು : ಅಂತರಾಜ್ಯ ಕಳ್ಳರ ಬಂಧನ: ತಲೆ ಮರೆಸಿಕೊಂಡ ಓರ್ವ ಆರೋಪಿಗಾಗಿ ಶೋಧ

ಶಿರಸಿ: ತಾಲೂಕಿನ ಬಂಡಲ್ ಗ್ರಾಮದ ಕಲ್ಲೇಶ್ವರ ದೇವಸ್ಥಾನ ಹಾಗೂ ಓಣಿ ವಿಶ್ಲೇಶ್ವರ ಗ್ರಾಮದ ಗಣಪತಿ ದೇವಸ್ಥಾನದಲ್ಲಿ ಕಳವು ಮಾಡಿದ್ದ ಇಬ್ಬರು ಅಂತರ್ ಜಿಲ್ಲಾ ದೇವಸ್ಥಾನ ಹಾಗೂ ಬೈಕ್ ಕಳ್ಳರನ್ನು ಗ್ರಾಮೀಣ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ಲಿಂಗರಾಜು ಮುಂಡಗೋಡ, ಹಳೇಬೀಡು, ಹುಬ್ಬಳ್ಳಿ, ವಿಜಾಪುರ, ಗದಗ, ಗೋಕಾಕಗಳಲ್ಲಿ ಬೈಕ್ ಕಳವು ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಮುಂಡಗೋಡ ಹಾಗೂ ಹಳೇಬೀಡು ಪೊಲೀಸ್ ಠಾಣಾ ಪ್ರಕರಣಗಳಿಗೆ ಸಂಬoಧಿಸಿದ ಒಟ್ಟು 3 ಬೈಕುಗಳನ್ನು ವಶಕ್ಕೆ ಪಡೆಯಲಾಗಿದೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಜಮ್ಮನಹಳ್ಳಿಯ ಲಿಂಗರಾಜು ರಾಮೇಗೌಡ ಹಾಗೂ ಶಿರಸಿ ಕೊಂಡಲಿಗಿಯ ಪ್ರವೀಣ್ಕುಮಾರ್ ನಾಯ್ಕ ಬಂಧಿತರು. ಈತನ ಮೇಲೆ ಈ ಹಿಂದೆ ಬೇಲೂರು ಠಾಣೆಯಲ್ಲಿ ಕೊಲೆ ಪ್ರಕರಣ ಹಾಗೂ ಮಂಕಿ, ಮೂಡಬಿದಿರೆ, ಬಿಜಾಪುರಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿತ್ತು. ಇನ್ನೋರ್ವ ಆರೋಪಿ ಮಹಾರಾಷ್ಟ್ರದ ಸಾಂಗ್ಲಿಯ ಅಜಿತ್ ಎನ್ನುವಾತ ತಲೆಮಾರೆಸಿಕೊಂಡಿದ್ದು, ಆತನ ಪತ್ತೆಗಾಗಿ ಬಲೆ ಬೀಸಲಾಗಿದೆ.

ವಿಸ್ಮಯ ನ್ಯೂಸ್, ಶಿರಸಿ

ನಿಮ್ಮ ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ಓಂ ಶ್ರೀಭವಾನಿ ಮಾತಾ ಜ್ಯೋತಿಷ್ಯಾಲಯ. ಪ್ರೀತಿಯಲ್ಲಿ ತೊಂದರೆ? ಮದುವೆಯಲ್ಲಿ ಸಮಸ್ಯೆ? ಗಂಡ-ಹೆಂಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ? ಸಂತಾನ ಭಾಗ್ಯ, ಅಕಸ್ಮಿಕ ಧನಲಾಭ,ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಕೇರಳದ ಪ್ರಸಿದ್ಧ ಜ್ಯೋತಿಷ್ಯರು.. ಪಂಡಿತ್:ದುರ್ಗಾ ಪ್ರಸಾದ್ ಗುರೂಜಿ. ಇಂದೇ ಸಂಪರ್ಕಿಸಿ ಮೊ:9686122581

Back to top button