Focus News
Trending

ದೀಪಾವಳಿ ಆಚರಣೆ: ಸ್ಥಳೀಯ ವಸ್ತುಗಳಿಗೆ ಇರಲಿ ಆದ್ಯತೆ

ಮುಂಡಗೋಡ: ಈ ಬಾರಿಯ ದೀಪಾವಳಿ ಆಚರಣೆಯಲ್ಲಿ ಸ್ಥಳೀಯ ವಸ್ತುಗಳನ್ನು ಖರೀದಿ ಮಾಡುವ ಮೂಲಕವಾಗಿ ಸ್ಥಳೀಯ ಉದ್ಯಮಕ್ಕೆ ಬೆಂಬಲ ನೀಡಿ ಎಂದು ಕಾರ್ಮಿಕ ಮತ್ತು ಸಕ್ಕರೆ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಕರೆ ನೀಡಿದರು.

ಪಟ್ಟಣದ ಪುಣ್ಯಕೋಟಿ ಮಲೆನಾಡ ಗಿಡ್ಡ ಗೋ ಸೇವಾ ಕೇಂದ್ರದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಗೋ ತಳಿಯ ಉತ್ಪನ್ನಗಳ ಉದ್ಘಾಟನೆ ಹಾಗೂ ಪ್ರೋತ್ಸಾಹ ಕಾರ್ಯಕ್ರಮವನ್ನು ಗೋವುಗಳಿಗೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಪಂಚಾಯತ ಸದಸ್ಯ ರವಿಗೌಡ ಪಾಟೀಲ್, ಬಿಜೆಪಿ ಮಂಡಲಾಧ್ಯಕ್ಷ ನಾಗಭೂಷಣ ಹಾವಣಗಿ ಪ್ರಮುಖ ಗುಡ್ಡಪ್ಪಾ ಕಾತೂರ್, ಉಮೇಶ ಬಿಜಾಪುರ ಹಾಗೂ ಸೇವಾ ಕೇಂದ್ರದ ಸದಸ್ಯರು ಪದಾಧಿಕಾರಿಗಳು ಹಾಜರಿದ್ದರು.

ವಿಸ್ಮಯ ನ್ಯೂಸ್, ಯಲ್ಲಾಪುರ

Related Articles

Back to top button