Important
Trending

ಭಟ್ಕಳದಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಗ್ ದಂಧೆಯಲ್ಲಿ ತೊಡಗಿದ್ದ ಏಳು ಜನರ ಬಂಧನ

ಭಟ್ಕಳದಲ್ಲೂ ಜೋರಾಗಿದ್ಯಾ ಬೆಟ್ಟಿಂಗ್ ದಂಧೆ
ಪೊಲೀಸರ ಮಹತ್ವದ ಕಾರ್ಯಾಚರಣೆ

ಭಟ್ಕಳ : ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್​ ದಂಧೆಯಲ್ಲಿ ತೊಡಗಿದ್ದ ಏಳು ಮಂದಿಯನ್ನು ತಾಲೂಕಿನ ಜಾಲಿ ರೋಡ್​ ಬಳಿ ಪೊಲೀಸರು ಬಂಧಿಸಿದ್ದಾರೆ.

ಅಬು ಶೇಖ್ (43), ಜಾಪರ್ ಹುಸೈ‌ನ್ (42), ಅಬಿದ್ ಅಬಿದಿನ್ (33), ವಾಸೀಮ್ ಶಬ್ಬರ್ (43), ಮಹಮದಸಾಬಿ ಖಾದಿರ್ (32), ಸಾಹಿರ್ ಭಾಷಾ(39), ಮಹಮದ್ ಸಾಕಿಬ್ (43) ಬಂಧಿತ ಆರೋಪಿಗಳು. ಇವರಿಂದ 50,100 ರೂ. ನಗದು ಹಾಗೂ ಬೆಟ್ಟಿಂಗ್​ಗೆ ಬಳಸುತಿದ್ದ ಮೊಬೈಲ್​ಗಳನ್ನು ವಶಕ್ಕೆ ಪಡೆಯಲಾಗಿದೆ.

ಭಟ್ಕಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಭಟ್ಕಳ ಎಎಸ್ಪಿ ನಿಖಿಲ್ ನೇತೃತ್ವದಲ್ಲಿ ಡಿಸಿಐಬಿ ಇನ್ಸ್​ಪೆಕ್ಟರ್ ನಿಶ್ಚಲ್ ಕುಮಾರ್ ಹಾಗೂ ತಂಡ ಕಾರ್ಯಾಚರಣೆ ನಡೆಸಿದೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Back to top button