
ಪುರಸಭೆ ಸ್ವತ್ತಿನ ಎಲ್ಲಾ ಅಂಗಡಿಕಾರರಿಗೆ & ಕೆಲಸಗಾರರಿಗೆ ಪರೀಕ್ಷೆ
ತಪ್ಪಿದ್ದ ಅಂಗಡಿ ಬಂದ್: ಕಾನೂನು ಕ್ರಮದ ಎಚ್ಚರಿಕೆ
ಕುಮಟಾ : ತಾಲೂಕಿನಲ್ಲಿ ಕರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದ್ದು, ಇದನ್ನು ತಾಲೂಕ ಆಡಳಿತ ಗಂಭೀರವಾಗಿ ಪರಿಗಣಿಸಿದೆ. ಈ ಕಾರಣದಿಂದಾಗಿ ಮೊದಲ ಹಂತದಲ್ಲಿ ಪಟ್ಟಣದಲ್ಲಿನ ಎಲ್ಲಾ ತರಕಾರಿ/ಹಣ್ಣಿನ/ಚಿಕನ್/ಮಟನ್/ ಬೀದಿ ಬದಿ ಅಂಗಡಿ ಹಾಗೂ ಪುರಸಭೆ ಸ್ವತ್ತಿನ ಎಲ್ಲಾ 60 ಅಂಗಡಿಕಾರಿಗೆ ಮತ್ತು ಇವರುಗಳ ಎಲ್ಲಾ ಅಂಗಡಿ ಕೆಲಸಗಾರರಿಗೆ ಕರೋನಾ ಪರೀಕ್ಷೆ ಕಡ್ಡಾಯಗೊಳಿಸಿದೆ.
ಕಾರಣ ಇವರುಗಳೆಲ್ಲ ತಾಲೂಕಾ ಆಸ್ಪತ್ರೆಗೆ ತೆರಳಿ ಇಂದಿನಿಂದಲೇ ಕರೋನಾ ಪರೀಕ್ಷೆ ಮಾಡಿಕೊಳ್ಳಲೇ ಬೇಕಾಗಿರುತ್ತದೆ. ದಿನಾಂಕ : 12-10-2020 ರಿಂದ ಬೆಳಿಗ್ಗೆ 10:30 ರ ನಂತರ ಮಧ್ಯಾನ 12:30 ರವರೆಗೆ ಪುರಸಭೆ ಕಛೇರಿ ಮುಂಭಾಗದಲ್ಲಿಯೂ ಕೂಡ ಕರೋನಾ ಪರೀಕ್ಷೆ ಮಾಡಿಸಿಕೊಳ್ಳಲು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಪರೀಕ್ಷಿಸಿಕೊಂಡವರು ಆಸ್ಪತ್ರೆಯ ಚೀಟಿಯನ್ನು ಕಡ್ಡಾಯವಾಗಿ ಪರಿಶೀಲನೆ ಸಂದರ್ಭದಲ್ಲಿ ತೋರಿಸತಕ್ಕದ್ದು. ಸೂಚಿಸಿದಂತೆ ಮೇಲ್ಕಂಡ ವ್ಯಾಪಾರಸ್ಥರು ಮತ್ತು ಇವರುಗಳ ಅಂಗಡಿ ಕೆಲಸಗಾರರು ನಿರಾಕರಿಸಿದ್ದಲ್ಲಿ ಸದರಿ ಅಂಗಡಿಗಳನ್ನು ಬಂದ್ ಮಾಡಲಾಗುವುದು ಹಾಗೂ ಇವರುಗಳನ್ನು ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು ಎಂದು ಆರೋಗ್ಯ ಇಲಾಖೆ ಮತ್ತು ಪುರಸಭೆ ವತಿಯಿಂದ ತಿಳಿಯಪಡಿಸಿದೆ.
ಈ ಸಂಬಂಧ ಪುರಸಭೆ ಮುಖ್ಯಾಧಿಕಾರಿ ಸುರೇಶ್ ಎಮ್ ಕೆ ಯವರು ಪ್ರಕಟಣೆ ನೀಡಿದ್ದು, ಸಹಕರಿಸುವಂತೆ ಕೋರಿದ್ದಾರೆ.
ವಿಸ್ಮಯ ನ್ಯೂಸ್, ಕುಮಟಾ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಮಂಗನಕಾಯಿಲೆ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
- ವೀರಭದ್ರೇಶ್ವರ ಬೀರದೇವ ದೇವಸ್ಥಾನದ ಪಕ್ಕದಲ್ಲಿ ನೂತನ ಸಮುದಾಯ ಭವನ: ಮೇ 4 ರಂದು ಭವ್ಯ ಕಟ್ಟಡ ಉದ್ಘಾಟನೆ
- ಭಟ್ಕಳದ ಮುಂಡಳ್ಳಿಯಲ್ಲಿ MGM ಸೌಹಾರ್ದ ಪತ್ತಿನ ಸಹಕಾರಿ ಸಂಘದ ನೂತನ ಶಾಖೆ ಶುಭಾರಂಭ
- KSRTC ಬಸ್ ಮತ್ತು ಕಾರ್ ನಡುವೆ ಭೀಕರ ಅಪಘಾತ: ಇಬ್ಬರ ಸಾವು?
- ಹೊನ್ನಾವರ ವಿಠ್ಠಲ ರುಖುಮಾಯಿ ದೇವಸ್ಥಾನದಲ್ಲಿ ವರ್ದಂತಿ ಉತ್ಸವ: ವಿವಿಧ ಸೇವೆ ಸಲ್ಲಿಸಿದ ಭಕ್ತರು