
ಕುಮಟಾದಲ್ಲಿ 10 ಕೇಸ್ ದೃಢ
ಹೊನ್ನಾವರ ತಾಲೂಕಿನಲ್ಲಿ ಐದು ಪಾಸಿಟಿವ್
ಕುಮಟಾ : ತಾಲೂಕಾ ವ್ಯಾಪ್ತಿಯಲ್ಲಿ ಇಂದು ಒಟ್ಟು 10 ಕರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ತಾಲೂಕಿನ ಬಾಡದಲ್ಲಿ 3, ಬಗ್ಗೋಣ 2, ಹೆಗಡೆ 1, ಗೋಕರ್ಣದ ಅಶೋಕೆ 1, ದಿವಗಿ 1, ಗುಡ್ಬಳ್ಳಿ 1 ಮತ್ತು ಪಟ್ಟಣ ವ್ಯಾಪ್ತಿಯಲ್ಲಿ 1 ಪ್ರಕರಣ ಪತ್ತೆಯಾಗಿದೆ.
ದಿವಗಿಯ 82 ವರ್ಷದ ವೃದ್ಧೆ, ಗುಡ್ಬಳ್ಳಿಯ 26 ವರ್ಷದ ಯುವಕ, ಕುಮಟಾದ 42 ವರ್ಷದ ಮಹಿಳೆ, ಬಗ್ಗೋಣದ 18 ವರ್ಷದ ಯುವತಿ, 16 ವರ್ಷದ ಬಾಲಕ, ಬಾಡದ 80 ವರ್ಷದ ವೃದ್ಧ, 70 ವರ್ಷದ ವೃದ್ಧ, 22 ವರ್ಷದ ಯುವತಿ, ಹೆಗಡೆಯ 45 ವರ್ಷದ ಪುರುಷನಿಗೆ ಸೋಂಕು ಕಾಣಿಸಿಕೊಂಡಿದೆ.
ಗೋಕರ್ಣ ಅಶೋಕೆಯ 55 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ. ಇಂದು 10 ಪ್ರಕರಣ ದಾಖಲಾದ ಬೆನ್ನಲೇ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1459ಕ್ಕೆ ಏರಿಕೆಯಾಗಿದೆ.
ಹೊನ್ನಾವರ ತಾಲೂಕಿನಲ್ಲಿ ಐದು ಪಾಸಿಟಿವ್
ಹೊನ್ನಾವರ: ತಾಲೂಕಿನಲ್ಲಿ ಇಂದು 5 ಜನರಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಪಟ್ಟಣ ವ್ಯಾಪ್ತಿಯಲ್ಲಿ 4, ಗ್ರಾಮೀಣ ಭಾಗದಲ್ಲಿ 1 ಕೇಸ್ ಕಾಣಿಸಿಕೊಂಡಿದೆ. ಪಟ್ಟಣದ ಪ್ರಭಾತಕ್ರಾಸ್ ನ 67 ವರ್ಷದ ಪುರುಷ, ರಥಬೀದಿಯ 41 ವರ್ಷದ ಪುರುಷ, 27 ವರ್ಷದ ಯುವತಿ, 19 ವರ್ಷದ ಯುವತಿಗೆ ಪಾಸಿಟಿವ್ ಬಂದಿದೆ.
ಗ್ರಾಮೀಣ ಭಾಗವಾದ ಗುಂಡಿಬೈಲಿನ 26 ವರ್ಷದ ಯುವಕ ಸೇರಿ ಒಟ್ಟು 5 ಜನರಲ್ಲಿ ಪಾಸಿಟಿವ್ ಕಂಡುಬoದಿದೆ. ತಾಲೂಕಾ ಆಸ್ಪತ್ರೆಯಲ್ಲಿ 14 ಜನರು ಚಿಕಿತ್ಸೆ ಪಡೆಯುತ್ತಿದ್ದರೆ, 138 ಸೋಂಕಿತರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.
ವಿಸ್ಮಯ ನ್ಯೂಸ್, ಯೋಗೇಶ್ ಮಡಿವಾಳ ಕುಮಟಾ ಮತ್ತು ಶ್ರೀಧರ್ ನಾಯ್ಕ, ಹೊನ್ನಾವರ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಪೊಲೀಸ್ ಇಲಾಖೆಯಿಂದ ಮುಕ್ತ ಆನ್ ಲೈನ್ ಚಿತ್ರಕಲಾ ಸ್ಪರ್ಧೆ: ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಮೂಡಿಸಲು ವಿದ್ಯಾರ್ಥಿಗಳೇ ಸಿದ್ದರಾಗಿ
- ಅಗಲಿದ ರಾಜಹಾಸ್ಯಗಾರ ಕಿನ್ನಿಗೋಳಿಗೆ ಅಂಕೋಲಾದ ಯಕ್ಷಮುಖಿಯಿಂದ ಭಾವ ನಮನ
- ಮುರುಡೇಶ್ವರ ಬೀಚ್ ನಲ್ಲಿ ಪ್ರವಾಸಿಗರ ಓಡಾಟಕ್ಕೆ ಮೂರು ತಿಂಗಳು ನಿಷೇಧ
- Monsoon Offer: ಮಂದಾರ ಎಲೈಟ್ ಫಂಕ್ಷನ್ ಹಾಲ್: ಬರ್ಥ್ ಡೇ ಪಾರ್ಟಿ , ಸಭೆ- ಸಮಾರಂಭ ಮುಂತಾದ ಕಾರ್ಯಕ್ರಮಗಳಿಗಾಗಿ ಬುಕ್ಕಿಂಗ್ ಮಾಡಿ