Focus News
Trending

ಕಾರಿನ ಟೈರ್ ಸ್ಫೋಟ: ರಸ್ತೆಯಿಂದ ಹೊಂಡಕ್ಕೆ ಬಿದ್ದ ಕಾರು

ಕುಮಟಾ: ಕಾರಿನ ಟೈರ್ ಸ್ಫೋಟಗೊಂಡು ಚಲಿಸುತ್ತಿದ್ದ ಕಾರು ರಸ್ತೆ ಪಕ್ಕದ ಹೊಂಡಕ್ಕೆ ಉರುಳಿದ ಘಟನೆ ಗೋಕರ್ಣದ ಹಿರೇಗುತ್ತಿ ಸಮೀಪ ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿನ ಟೈರ್ ಏಕಾಏಕಿ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ನಿಯಂತ್ರಣ ತಪ್ಪಿದ ಕಾರು, ರಸ್ತೆಯ ಪಕ್ಕದಲ್ಲೇ ಪಲ್ಟಿ ಹೊಡೆದು ಬಿದ್ದಿದೆ. ಹೆಚ್ಚಿನ ಮಾಹಿತಿ ಇನ್ನೂ ತಿಳಿದುಬರಬೇಕಿದೆ.

ಇತ್ತಿಚೆಗಷ್ಟೆ ಗೋಕರ್ಣದಲ್ಲಿ ತಡರಾತ್ರಿ ಹೊಂಡಕ್ಕೆ ಕಾರೊಂದು ಉರುಳಿಬಿದ್ದಿತ್ತು. ಈ ಅಪಘಾತದಲ್ಲಿ ಅಂಕೋಲಾದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದ. ಕಾರಿನಲ್ಲಿ ಇನ್ನೊರ್ವ ವ್ಯಕ್ತಿಗೆ ಕೈ ಮೂಳೆ ಮುರಿದಿತ್ತು.

ವಿಸ್ಮಯ ನ್ಯೂಸ್, ಕುಮಟಾ

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Back to top button