Important
Trending

ರಾಜ್ಯವನ್ನೇ ಆತಂಕಗೊಳಿಸುವ ನಿಗೂಢ ಪ್ರಕರಣ: ಸಾಮೂಹಿಕವಾಗಿ ಕೈ-ಕೊಯ್ದುಕೊಂಡ 14 ವಿದ್ಯಾರ್ಥಿನಿಯರು: ಆಗಿದ್ದೇನು ನೋಡಿ?

ಆತ್ಮಹತ್ಯೆಗೆ ಯತ್ನಿಸಿದರೇ? ಈ ಘಟನೆಯಿಂದ ಪಾಲಕರಲ್ಲಿ ಆತಂಕ

ಕಾರವಾರ: ರಾಜ್ಯವನ್ನೇ ಆತಂಕಗೊಳಿಸುವ ಪ್ರಕರಣವೊಂದು ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ. ಹೌದು, ಸಾಮೂಹಿಕವಾಗಿ 14 ವಿದ್ಯಾರ್ಥಿನಿಯರು ಕೈ- ಕೊಯ್ದುಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಒಂದಲ್ಲ, ಎರಡಲ್ಲ 14 ವಿದ್ಯಾರ್ಥಿನಿಯರು, ಯಾಕೆ ಹೀಗೆ ಕೈ-ಕೊಯ್ದುಕೊಂಡರು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.

ದಾಂಡೇಲಿಯ ಜನತಾ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಈ ರೀತಿ ಮಾಡಿಕೊಂಡ 14 ವಿದ್ಯಾರ್ಥಿಗಳು 9 ಮತ್ತು 10 ನೇ ತರಗತಿಯವರು ಎಂಬುದು ತಿಳಿದುಬಂದಿದೆ. ಶಾಲೆಯಲ್ಲಿ ತಪಾಸಣೆ ನಡೆಸುತ್ತಿರುವ ವೇಳೆ 14 ವಿದ್ಯಾರ್ಥಿನಿಯರ ಕೈ ಮೇಲೆ ಗೀರಿಕೊಂಡ ಘಟನೆ ಬೆಳಕಿಗೆ ಬಂದಿದೆ. ಇವರೆಲ್ಲ ಯಾಕೆ ಹೀಗೆ ಮಾಡಿಕೊಂಡಿದ್ದಾರೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

ವಿಷಯ ತಿಳಿದ ತಕ್ಷಣ ಶಿಕ್ಷಕರು, ಶಾಲಾ ಆಡಳಿತ ಮಂಡಳಿ ಸಭೆ ಕರೆದು, ಪಾಲಕರ ಜೊತೆ ಈ ಎಲ್ಲಾ ವಿಷಯನ್ನು ಚರ್ಚಿಸಿದೆ. ಪೊಲೀಸರು ಮಹಿಳಾ ಸಿಬ್ಬಂದಿಗಳನ್ನು ಕಳುಹಿಸಿ, ಕೌನ್ಸಿಲಿಂಗ್ ರೀತಿಯಲ್ಲಿ ವಿದ್ಯಾರ್ಥಿನಿಯರ ವಿಚಾರಣೆ ನಡೆಸಿದ್ದಾರೆ. ಆದರೆ, ಒಬ್ಬರು ಒಂದೊoದು, ಉತ್ತರವನ್ನು ಹೇಳಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ಇದೊಂದು ವಿಚಿತ್ರ ಆಟ ( game )ಎನ್ನಲಾಗಿದೆ. ಒಟ್ಟಿನಲ್ಲಿ ಈ ಘಟನೆಯಿಂದ ಪಾಲಕರು ಆತಂಕಗೊoಡಿದ್ದು, ತಲೆಕಡೆಸಿಕೊಳ್ಳುವಂತಾಗಿದೆ. ಎಲ್ಲರೂ ಆತ್ಮಹತ್ಯೆಗೆ ಯುತ್ನಿಸಿದರೆ ಎಂಬ ಅನುಮಾನ ಕಾಡುತ್ತಿದೆ. ತನಿಖೆಯಿಂದ ಸತ್ಯ ಬಯಲಾಗಬೇಕಿದೆ.

ಸಂದೇಶ್ ಎನ್ ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button