Focus NewsImportant
Trending

ಖಾಸಗಿ ಬಸ್ , ಕಾರಿನ ನಡುವೆ ಅಪಘಾತ: ಪಲ್ಟಿಯಾದ ಬಸ್

ಯಲ್ಲಾಪುರ: ಖಾಸಗಿ ಬಸ್ ಹಾಗೂ ಇನೋವಾ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಪರಿಣಾಮವಾಗಿ ಬಸ್ ಪಲ್ಟಿಯಾಗಿ 40ಕ್ಕೂ ಹೆಚ್ಚು ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಯಲ್ಲಾಪುರದ ಆರತಿಬೈಲ್ ಕ್ರಾಸ್ ಬಳಿ ನಡೆದಿದೆ.ಯಲ್ಲಾಪುರ ಕಡೆಯಿಂದ ಗೋಕರ್ಣ ಪ್ರವಾಸಕ್ಕೆ ಹೋಗುತ್ತಿದ್ದ ಖಾಸಗಿ ಬಸ್ ಹಾಗೂ ಮಂಗಳೂರಿನಿoದ ಮುಂಬೈ ಕಡೆ ಚಲಿಸುತ್ತಿದ್ದ ಇನೋವಾ ನಡುವೆ ಅಪಘಾತವಾಗಿದೆ. ಅಪಘಾದಿಂದಾಗಿ ಖಾಸಗಿ ಬಸ್ ಹೆದ್ದಾರಿಯ ಪಕ್ಕದಲ್ಲಿ ಪಲ್ಟಿಯಾಗಿದ್ದು, ಬಸ್ ನಲ್ಲಿದ್ದ 40ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಹಾರಾಷ್ಟ್ರದಿಂದ 40ಕ್ಕೂ ಹೆಚ್ಚು ಪ್ರವಾಸಿಗರು ಖಾಸಗಿ ಬಸ್ ಮೂಲಕ ಗೋಕರ್ಣ, ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದರು ಎಂಬ ಮಾಹಿತಿ ದೊರೆತಿದೆ.ಇನ್ನೋವಾ ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ವಿಸ್ಮಯ ನ್ಯೂಸ್, ಯಲ್ಲಾಪುರ

Back to top button