ಮನೆಗೆ ಹೋಗುತ್ತಿದ್ದ ವೇಳೆ ಬೈಕ್ ಅಡ್ಡಗಟ್ಟಿ ಹಣ ದರೋಡೆ: ಆರೇ ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿದ ಪೊಲೀಸರು

ಅಂಗಡಿ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಸುಲಿಗೆ ಮಾಡಿದ್ದ ದುಷ್ಕರ್ಮಿಗಳು

ಶಿರಸಿ: ವ್ಯಕ್ತಿಯೊಬ್ಬರನ್ನು ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಕೇವಲ ಆರು ಗಂಟೆಗಳಲ್ಲಿ ಬಂಧಿಸುವಲ್ಲಿ ಶಿರಸಿ ಪೊಲೀಸರು ಯಶಸ್ವಿಯಾಗಿದ್ದಾರೆ.‌ ಅಮ್ಮಿನಳ್ಳಿಯ ಜನತಾ ಕಾಲೋನಿಯ ಮಹಮ್ಮದ್ ಇಸಾಕ್ ಅಬ್ದುಲ್ಲಾ ವಹಾಬ್ ಶೇಖ್ ಹಾಗೂ ಮತ್ತಿಗಾರಿನ ಪ್ರವೀಣ ಮಾರುತಿ ಅಲಗೇರಿಕರ್ ಬಂಧಿತರು ಎಂದು ತಿಳಿದುಬಂದಿದೆ.

Indian Railway Recruitment 2022: 3,115 ಹುದ್ದೆಗಳಿಗೆ ಅರ್ಜಿ ಆಹ್ವಾನ: SSLC ಪಾಸಾದವರು ಅರ್ಜಿ ಸಲ್ಲಿಸಬಹುದು

ಅಕ್ಟೋಬರ್‌ 5 ರಂದು ಅಮ್ಮೀನಳ್ಳಿಯಲ್ಲಿ ಬಳಿ ಈ ಸುಲಿಗೆ ಪ್ರಕರಣ‌ ನಡೆದಿತ್ತು. ಕಿರಾಣಿ ಅಂಗಡಿ ಇಟ್ಟುಕೊಂಡಿದ್ದ, ದೂರುದಾರ ಶ್ರೀಪಾದ ದೇವರು ಹೆಗಡೆ ಎಂಬ ವ್ಯಕ್ತಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಹಣಗಾರ ಕ್ರಾಸ್ ಸಮೀಪ ಇಬ್ಬರು ಆರೋಪಿಗಳು ಸುಲಿಗೆ ಮಾಡಿದ್ದರು. ವಾಹನದ ಮೇಲೆ ಬಂದು ಶ್ರೀಪಾದ ಹೆಗಡೆ ಅವರ ಸ್ಕೂಟಿಯನ್ನು ಅಡ್ಡಗಟ್ಟಿ ನಿಲ್ಲಿಸಿ ಸ್ಕೂಟಿಯ ಮುಂಬಾಗದಲ್ಲಿದ್ದ ಕ್ಯಾಶ್‍ಬ್ಯಾಗನ್ನು ಕಿತ್ತುಕೊಂಡು ಪರಾರಿಯಾಗಿದ್ದರು.

ಶ್ರೀಪಾದ ಹೆಗಡೆಯವರು ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಕೇವಲ ಆರು ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 11 ಸಾವಿರ ರೂಪಾಯಿ ಹಾಗೂ 3 ಮೊಬೈಲ್‍ಗಳು, ಸೇರಿ ಸುಲಿಗೆ ಮಾಡಿದ್ದ ಎಲ್ಲಾ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಿಸ್ಮಯ ನ್ಯೂಸ್ ಶಿರಸಿ

Exit mobile version