Follow Us On

WhatsApp Group
ImportantJob News
Trending

Indian Railway Recruitment 2022: 3,115 ಹುದ್ದೆಗಳಿಗೆ ಅರ್ಜಿ ಆಹ್ವಾನ: SSLC ಪಾಸಾದವರು ಅರ್ಜಿ ಸಲ್ಲಿಸಬಹುದು

SSLC ಪಾಸಾದವರಿಗೆ ಭಾರತೀಯ ರೈಲ್ವೆ ಇಲಾಖೆಯ ಪೂರ್ವ ರೈಲ್ವೆಯಲ್ಲಿ ಅಪ್ರೆಂಟಿಸ್‌ಗಳ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕನಿಷ್ಠ 50% ಅಂಕಗಳೊoದಿಗೆ ಮಾನ್ಯತೆ ಪಡೆದ ಮಂಡಳಿಯಿoದ 10 ನೇ ತರಗತಿ ಉತ್ತೀರ್ಣರಾದವರು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ಆಸಕ್ತ ಹಾಗು ಅರ್ಹ ಅಭ್ಯರ್ಥಿಗಳು ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್ indianrailways.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

2,200 ಕೆ.ಜಿ ದನದ ಮಾಂಸ ವಶಕ್ಕೆ| ಭಾರೀ ಪ್ರಮಾಣದಲ್ಲಿ ಅಕ್ರಮವಾಗಿ ದನದ ಮಾಂಸ ಸಾಗಾಟ ಪ್ರಕರಣ

ಒಟ್ಟು ಹುದ್ದೆಗಳು 3115 ಹುದ್ದೆಗಳು ಖಾಲಿಯಿವೆ. ಹೌರಾ ವಿಭಾಗ – 659 ಹುದ್ದೆಗಳು, ಲಿಲುವಾ ಕಾರ್ಯಾಗಾರ – 612 ಹುದ್ದೆಗಳು, ಕಂಚ್ರಪಾರಾ ಕಾರ್ಯಾಗಾರ – 187 ಹುದ್ದೆಗಳು, ಸೀಲ್ದಾ ವಿಭಾಗ – 440 ಹುದ್ದೆಗಳು, ಅಸನ್ಸೋಲ್ ಕಾರ್ಯಾಗಾರ – 412 ಹುದ್ದೆಗಳು, ಮಾಲ್ಡಾ ವಿಭಾಗ – 138 ಹುದ್ದೆಗಳು, ಜಮಾಲ್ಪುರ್ ಕಾರ್ಯಾಗಾರ – 667 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

Indian Railway Recruitment: ಅರ್ಹತಾ ಮಾನದಂಡಗಳು ಏನು?

ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕನಿಷ್ಠ 50% ಅಂಕಗಳೊoದಿಗೆ ಮಾನ್ಯತೆ ಪಡೆದ ಮಂಡಳಿಯಿoದ 10 ನೇ ತರಗತಿ ಉತ್ತೀರ್ಣರಾಗಿರಬೇಕು. ಅಲ್ಲದೆ, ಸಂಬoಧಿತ ವಿಷಯದಲ್ಲಿ ಐಟಿಐ ಪ್ರಮಾಣಪತ್ರವನ್ನು ಹೊಂದಿರಬೇಕು. ಹುದ್ದೆಗಳಿಗೆ 15 ವರ್ಷದಿಂದ 24 ವರ್ಷಗಳ ನಡುವಿನ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

Indian Railway Recruitment: ಆಯ್ಕೆ ಪ್ರಕ್ರಿಯೆ ಹೇಗೆ ನಡೆಯಲಿದೆ?

ಸರಾಸರಿ ಅಂಕಗಳು ಮತ್ತು ಐಟಿಐನಲ್ಲಿನ ವಿದ್ಯಾರ್ಹತೆ ಆಧಾರದ ಮೇಲೆ ಅಭ್ಯರ್ಥಿಗಳನ್ನು ಡಾಕ್ಯುಮೆಂಟ್ ವೆರಿಫಿಕೇಶನ್ ಗಾಗಿ ಮೊದಲು ಕರೆಯಲಾಗುತ್ತದೆ. ನಂತರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅಕ್ಟೋಬರ್ 29, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು. ಅಥವಾ ಅಧಿಸೂಚನೆ ಕುರಿತು ಇನ್ನಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ ನೋಡಿ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button