Important
Trending

ಕೋಳಿ ಅಂಕದ ಅಡ್ಡೆಯ ಮೇಲೆ ದಾಳಿ : 12 ಬೈಕ್‍ಗಳು ವಶಕ್ಕೆ

ಕುಮಟಾ : ಖಚಿತ ಮಾಹಿತಿ ಮೇರೆಗೆ ತಾಲೂಕಿನ ಹೆಗಡೆ ಗ್ರಾಮ ಪಂಚಾಯತ ವ್ಯಾಪ್ತಿಯ ಲುಕ್ಕೇರಿ ಬಳಿ ಕೋಳಿ ಅಂಕದ ಮೇಲೆ ದಾಳಿ ನಡೆಸಿದ ಕುಮಟಾ ಪೊಲೀಸ್ ತಂಡ ಕೋಳಿ ಹಾಗೂ ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡ ಘಟನೆ ಇಂದು ನಡೆದಿದೆ. ಬಂಧಿತರಿಂದ 12 ಮೋಟಾರು ಸೈಕಲುಗಳು,2 ಕೋಳಿ ಹಾಗೂ 2200 ರೂ ನಗದು ಮತ್ತು ಕೋಳಿ ಕತ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ಹಲವಾರು ದಿನಗಳಿಂದ ಲುಕ್ಕೇರಿ ದೇವಸ್ಥಾನ ಬಳಿ ಬಯಲು ಜಾಗದಲ್ಲಿ ಕೋಳಿ ಅಂಕ ಅವ್ಯಾಹತವಾಗಿ ನಡೆಯುವ ಕುರಿತು ಮಾಹಿತಿ ಲಭ್ಯವಾಗಿತ್ತು. ಇಂದು ಸಿ.ಪಿ.ಐ ಪರಮೇಶ್ವರ ಗುನಗಾ ಮತ್ತು ಪಿ.ಎಸ್.ಐ ಆನಂದಮೂರ್ತಿ ಅವರ ಮಾರ್ಗದರ್ಶನದ ಮೇರೆಗೆ ಕುಮಟಾ ಪೊಲೀಸರು ಅಪರಾಧ ವಿಭಾಗದ ಪಿ ಎಸ್ ಆಯ್ ಸುಧಾ ಅಘನಾಶಿಯವರ ನೇತೃತ್ವದಲ್ಲಿ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಸ್ಮಯ ನ್ಯೂಸ್, ಕುಮಟಾ

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ
ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button