Follow Us On

Google News
Info
Trending

ಆಶ್ವಪರ್ವ ನಾಟಕ ಪ್ರದರ್ಶನ

ಕುಮಟಾ: ತಾಲ್ಲೂಕಿನ ವಾರಿಧಿ ರಂಗ ಕೇಂದ್ರ (ರಿ.) ತಂಡದ ಅಭಿನಯ ರಂಗ ತರಬೇತಿ 2020 ರಂಗ ಶಿಬಿರವು ದಿನಾಂಕ 23.11.2020 ರ ಸೋಮವಾರ ಸಂಜೆ 6:00 ಗಂಟೆಗೆ ರೋಟರಿ ಸಭಾಭವನದ ಪಕ್ಕದ ಶಾಂತಿಕಾ ಡಾನ್ಸ್ ಶಾಲೆಯಲ್ಲಿ ಸಮಾರೋಪ ಸಮಾರಂಭಗೊಳ್ಳಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ರಂಗ ಕರ್ಮಿಗಳಾದ ಶ್ರೀ ಜಿ. ಡಿ. ಭಟ್ಟರು ವಹಿಸಲಿದ್ದಾರೆ. ಈ ರಂಗ ತರಬೇತಿ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಶ್ರೀ ವಿನೋದ್ ಭಂಡಾರಿ ನೀನಾಸಂ ಇವರು ನಿರ್ದೇಶನ ಮಾಡಿರುವ ಶ್ರೀ ರಾಮನಾಥ ರವರ ರಚನೆಯ “ಆಶ್ವಪರ್ವ” ಎಂಬ ನಾಟಕ ಪ್ರದರ್ಶನವಿರುತ್ತದೆ. ಸೀಮಿತ ಪ್ರೇಕ್ಷಕರಿಗೆ ಮಾತ್ರ ಅವಕಾಶ. ಮತ್ತು ಕೋವಿಡ್-19 ನಿಯಮ ಪಾಲನೆ ಕಡ್ಡಾಯವಾಗಿರುತ್ತದೆ ಎಂದು ವಾರಿಧಿ ರಂಗ ಕೇಂದ್ರದ ನಿರ್ದೇಶಕರಾದ ಶ್ರೀ ಶ್ರೀಕಾಂತ್ ಕುಮಟಾ ತಿಳಿಸಿರುತ್ತಾರೆ.

ವಿಸ್ಮಯ ನ್ಯೂಸ್, ಕುಮಟಾ

Back to top button