Big NewsImportant
Trending

ಕುದಿಯುತ್ತಿರುವ ಬಿಸಿ ಎಣ್ಣೆಯಲ್ಲಿ ಕೈಹಾಕಿ ವಡೆ ಸೇವೆ: ಈ ಭಾಗದಲ್ಲಿದೆ ವಿಶಿಷ್ಠ ಆಚರಣೆ

ಕಬ್ಬಿಣದ ಬಾಣಲಿಯಲ್ಲಿ ಕುದಿಯುತ್ತಿರುವ ಬಿಸಿ ಎಣ್ಣೆ: ಬೇಯುತ್ತಿರುವ ವಡೆ

ಕುಮಟಾ: ಭೂಮಿ ಹುಣ್ಣಿಮೆಯ ದಿನ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ವಿಶಿಷ್ಠ ಆಚರಣೆಯೊಂದು ನಡೆಯುತ್ತದೆ. ಹೌದು, ಇಲ್ಲಿನ ಶಾಂತೇರಿ ಕಾಮಾಕ್ಷಿ ದೇವಾಲಯದಲ್ಲಿ ಕುದಿಯುತ್ತಿರುವ ಎಣ್ಣೆಯಿಂದ ಖಾಲಿ ಕೈಯಲ್ಲಿ ಭಕ್ತರು ವಡೆ ತೆಗೆದು ಭಕ್ತಿ ಪರಾಕಾಷ್ಠೆ ಮೆರೆಯುತ್ತಾರೆ. ಕಬ್ಬಿಣದ ಬಂಡಿಯಲ್ಲಿ ಕುದಿಯುತ್ತಿರುವ ಬಿಸಿ ಎಣ್ಣೆಯಲ್ಲಿ ಬೇಯುತ್ತಿರುವ ವಡೆಗಳನ್ನು ಬರಿಗೈನಲ್ಲಿ ಭಕ್ತರು ತೆಗೆಯುವ ಸಂಪ್ರದಾಯ ಹಿಂದನಿoದ ನಡೆದುಕೊಂಡು ಬಂದಿದೆ.

ಸ್ನೇಹಿತೊಂದಿಗೆ ಮಾತನಾಡುತ್ತಿದ್ದ ವೇಳೆ ವೇಗವಾಗಿ ಬಂದ ಕಾರು ಡಿಕ್ಕಿ: ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಸಾವು

ಪ್ರತೀ ವರ್ಷ ಭೂಮಿ ಹುಣ್ಣಿಮೆ ದಿನದಂದು ನಡೆಯುವ ಉತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಳ್ಳುತ್ತಾರೆ. ಒಳಿತಿಗಾಗಿ ಹರಕೆ ಕಟ್ಟಿಕೊಳ್ಳುವ ಭಕ್ತರು ಕಾದ ಬಾಣಲಿಯಲ್ಲಿ ವಡೆ ತೆಗೆಯುವ ಮೂಲಕ ಹರಕೆ ತಮ್ಮ ತೀರಿಸುತ್ತಾರೆ. ಕುದಿಯುತ್ತಿರುವ ಎಣ್ಣೆಯಲ್ಲಿ ಕೈಹಾಕಿದರೂ ಭಕ್ತರಿಗೆ ಏನೂ ಆಗದಿರುವುದು ಪವಾಡ ಎಂದು ಇಲ್ಲಿನ ಆಸ್ತಿಕ ಭಕ್ತರು ನಂಬಿದ್ದಾರೆ.

ಅರ್ಚಕರಿoದ ಹೂವಿನ ಪ್ರಸಾದ ಪಡೆದು ವಡೆ ಸೇವೆ

ಹರಕೆ ತೀರಿಸುವ ಮುನ್ನ ಭಕ್ತರು 15 ದಿನ ದೇವರ ಸೇವೆ ಮಾಡುತ್ತಾರೆ. ವಡೆ ತೆಗೆಯುವ ಮೂರು ದಿನ ಮುಂಚಿತ ಮಾಂಸಹಾರ ಸೇವನೆಯನ್ನ ಬಿಡುವುದು ವಾಡಿಕೆ. ಬಳಿಕ ಬೆಳಿಗ್ಗೆ ದೇವಸ್ಥಾನ ಆವರಣದಲ್ಲಿ ತೀರ್ಥಸ್ನಾನ ಮಾಡಿ ನಂತರ ದೇವಾಲಯದ ಅರ್ಚಕರಿಂದ ತೀರ್ಥವನ್ನು ಪಡೆದು ಎಣ್ಣೆಯಲ್ಲಿ ವಡೆಯನ್ನು ತೆಗೆಯುತ್ತಾರೆ.

ಕುದಿಯುತ್ತಿರುವ ಎಣ್ಣೆಯಲ್ಲಿ ಒಂದೆಡೆ ವಡೆ ಕರಿಯುತ್ತಿದ್ದರೆ, ಇದೇ ವೇಳೆ ಭಕ್ತರು ಬರಿಗೈನಲ್ಲಿ ಎಣ್ಣೆಗೆ ಕೈಯನ್ನು ಹಾಕಿ ವಡೆಯನ್ನ ತೆಗೆಯುತ್ತಾರೆ. ಇದಾದ ನಂತರ ಸಾಲು ಸಾಲಾಗಿ ಬರುವ ಭಕ್ತರು ದೇವಸ್ಥಾನದ ಅರ್ಚಕರಿಂದ ಹೂವಿನ ಪ್ರಸಾದವನ್ನ ಪಡೆದು ಕಾದಿರುವ ಎಣ್ಣೆಯಲ್ಲಿ ಕೈಯನ್ನ ಹಾಕಿ ವಡೆಯನ್ನ ತೆಗೆಯುತ್ತಾರೆ.

ವಿಸ್ಮಯ ನ್ಯೂಸ್, ಕುಮಟಾ

Back to top button