ಹೊನ್ನಾವರ: ಪರೇಶ ಮೇಸ್ತ ಸಾವಿನ ಪ್ರಕರಣವನ್ನು ಅವನ ತಂದೆ ಕಮಲಾಕರ ಮೇಸ್ತ ಅವರ ಭಾವನೆಯಂತೆ ಪುನರ್ ತನಿಖೆಗೆ ಆದೇಶ ಕೊಡುವಂತೆ ಗೃಹಮಂತ್ರಿಗಳು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಮಾಡಿ ಮನವಿ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಹೊನ್ನಾವರದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದರು,
ಚಾಲಕನ ನಿಯಂತ್ರಣ ತಪ್ಪಿ ಪ್ಯಾಸೆಂಜರ್ ಟೆಂಪೊ ಪಲ್ಟಿ: ಓರ್ವ ಸಾವು: 12 ಪ್ರಯಾಣಿಕರಿಗೆ ಗಾಯ
ಹೊನ್ನಾವರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ ಗೃಹ ಮಂತ್ರಿಗಳ ಜೊತೆಗೆ ಈಗಾಗಲೇ ಮಾತನಾಡಿದ್ದೇನೆ. ಸಿಬಿಐ ಬಿ ರಿಪೋರ್ಟ್ ಹಾಕಿದ ವರದಿಯನ್ನು ತರಿಸಿಕೊಂಡು ಗೃಹಮಂತ್ರಿಗಳು ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಜೊತೆ ಚರ್ಚೆಮಾಡಿ ಪುನರ್ ತನಿಖೆಗೆ ಮನವಿ ಮಾಡುವುದಾಗಿ ತಿಳಿಸಿದರು. ಪರೇಶ ಮೇಸ್ತನ ತಂದೆಯ ಭಾವನೆಗಳಿರುವುದು ತನ್ನ ಮಗನ ಸಾವು ಅಸಹಜವಾಗಿದೆ. ಅದು ಹೇಗೆ ನಡೆದಿದೆ ಎಂಬ ಸಂಚನ್ನು ಬೇಧಿಸಬೇಕಿದೆ. ಈಗಿರುವ ಬಿರಿಪೋರ್ಟಿಗೆ ಬೇರೆಬೇರೆ ಕಾರಣಗಳಿರಬಹುದು. ಮರುತನಿಖೆ ಮಾಡಬೇಕು ಎಂಬ ಭಾವನೆಗೆ ಅರ್ಥ ಇದೆ ಎಂದರು.
ಇವತ್ತು ಪರೇಶ ಮೇಸ್ತನ ತಂದೆ ಕಮಲಾಕರ ಮೇಸ್ತರನ್ನು ಭೇಟಿಯಾಗಿದ್ದೆ. ತನ್ನ ಮಗನದು ಸಹಜವಾದ ಸಾವಲ್ಲ. ಡಿಸೆಂಬರ್ 6ರಂದು ಅಲ್ಲಿ ನಡೆದಿರುವ ಘಟನೆಗಳು, ನಂತರ ನಡೆದ ಘಟನೆಗಳು, ಇತರರಿಗೆ ಆಗಿರುವ ಪೆಟ್ಟುಗಳು ಇವೆಲ್ಲವನ್ನೂ ಗಮನಿಸಿದಾಗ ತನ್ನ ಮಗನ ಸಾವು ಅಸಹಜ. ತನಿಖೆಯ ಸ್ವರೂಪಗಳು ಬದಲಾಗಬೇಕು. ತೀವ್ರ ಅಗಬೇಕು. ತನ್ನ ಮಗನ ಸಾವಿನ ಪ್ರಕರಣವನ್ನು ಪುನರ್‌ತನಿಖೆ ಮಾಡಲು ಸರಕಾರ ಆದೇಶ ಕೊಡಬೇಕು ಎಂದು ಕಮಲಾಕರ ಮೇಸ್ತ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ದಿನಕರ ಶೆಟ್ಟಿ, ಶಾಸಕ ಸುನೀಲ ನಾಯ್ಕ, ಎಂ.ಎಲ್.ಸಿ. ಗಣಪತಿ ಉಳ್ವೇಕರ, ಪಶ್ಚಿಮಘಟ್ಟ ಸಂರಕ್ಷಣೆ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಹೊನ್ನಾವರ ಮಂಡಲಾಧ್ಯಕ್ಷ ರಾಜೇಶ ಭಂಡಾರಿ, ಮುಖಂಡರಾದ ಎನ್.ಎಸ್.ಹೆಗಡೆ ಕರ್ಕಿ, ಶಿವರಾಜ ಮೇಸ್ತ, ಉಮೇಶ ನಾಯ್ಕ, ಎಂ.ಜಿ.ನಾಯ್ಕ, ನಾಗರಾಜ ನಾಯಕ ಕಾರವಾರ, ವಿನೋದ ನಾಯ್ಕ ರಾಯಲಕೇರಿ, ಎಂ.ಎಸ್.ಹೆಗಡೆ ಕಣ್ಣಿಮನೆ, ವಿಜಯ ಕಾಮತ, ಮಂಜುನಾಥ ನಾಯ್ಕ, ನಾಗರಾಜ ಭಟ್, ಸುಭಾಷ ಹರಿಜನ, ದತ್ತಾತ್ರೆಯ ಮೇಸ್ತ, ಭಾಗ್ಯಾ ಮೇಸ್ತ, ಲೋಕೇಶ ಮೇಸ್ತ, ಸುರೇಶ ಹರಿಕಾಂತ ಮತ್ತಿತರರು ಉಪಸ್ಥಿತರಿದ್ದರು.
ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ,