ಚಾಲಕನ ನಿಯಂತ್ರಣ ತಪ್ಪಿ ಪ್ಯಾಸೆಂಜರ್ ಟೆಂಪೊ ಪಲ್ಟಿ: ಓರ್ವ ಸಾವು: 12 ಪ್ರಯಾಣಿಕರಿಗೆ ಗಾಯ

ಹೊನ್ನಾವರ: ಗೇರುಸೋಪ್ಪಾ ದಿಂದ ಹೊನ್ನಾವರ ಕಡೆಗೆ ಚಲಿಸುತ್ತಿದ ಪ್ಯಾಸೆಂಜರ್ ಟೆಂಪೊ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ತಾಲ್ಲೂಕಿನ ಖರ್ವಾ ಕ್ರಾಸ್ ಸಮೀಪ ಬೆಳಿಗ್ಗೆ ನಡೆದಿದೆ. ಇಂದು ಮುಂಜಾನೆ ಗೇರುಸೋಪ್ಪಾ ದಿಂದ ಪ್ಯಾಸೆಂಜರ್ ತುಂಬಿಕೊoಡು ಹೊನ್ನಾವರಕ್ಕೆ ಚಲಿಸುತ್ತಿದ್ದ ಟೆಂಪೋ ವಾಹನ ಖರ್ವಾ ಕ್ರಾಸ್ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ವಾಹನದಲ್ಲಿ ಪ್ರಯಾಣಿಸುತ್ತಿದ್ದ 12 ಜನರಿಗೆ ಗಾಯವಾಗಿದೆ.

Recruitment 2022: ಆರಂಭಿಕ ವೇತನ 43 ಸಾವಿರ: HAL ನಲ್ಲಿ ಉದ್ಯೋಗಾವಕಾಶ: SSLC, PUC, ITI ಆದವರು ಅರ್ಜಿ ಸಲ್ಲಿಸಬಹುದು

ಹುನುಮಂತ ಪೂಜಾರಿ ಜಲವಳ್ಳಿ ಕರ್ಕಿಯ ನಿವಾಸಿ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾನೆ. ಇನ್ನೊರ್ವ ವ್ಯಕ್ತಿಗೆ ಗಂಭೀರಗಾಯವಾಗಿದ್ದು, ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಣ್ಣಪುಟ್ಟ ಗಾಯಗೊಂಡ ಉಳಿದ 12 ಪ್ರಯಾಣಿಕರು ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಹೊನ್ನಾವರ ಪೋಲಿಸರು ಆಗಮಿಸಿ ಸಂಚಾರಕ್ಕೆ ಅನುವುಮಾಡಿ ತನಿಖೆ ಆರಂಭಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನು ತಿಳಿದುಬರಬೇಕಿದೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Exit mobile version