Follow Us On

WhatsApp Group
Important
Trending

Junior Modi: ರೋಡ್ ಶೋ ಮಾಡಿದ ಜೂನಿಯರ್ ಮೋದಿ: ಸೆಲ್ಪಿ ತೆಗೆದುಕೊಳ್ಳಲು ಮುಗಿಬಿದ್ದ ಜನ

ನೋಡೋಕೆ ಸೇಮ್ ಟು ಸೇಮ್ ನರೇಂದ್ರ ಮೋದಿ: ಯಾರೀವರು?

ಕಾರವಾರ: ಇವರು ಜೂನಿಯರ್ ಮೋದಿ (Junior Modi) .. ನೋಡೋಕೆ ಸೇಮ್ ಟು ಸೇಮ್ ನರೇಂದ್ರ ಮೋದಿ ರೀತಿನೆ ಕಾಣ್ತಾರೆ.. ಹೌದು, ಇವರು ಹೆಸರು ಸದಾನದಂದ ನಾಯಕ. ಉಡುಪಿ ಜಿಲ್ಲೆಯ ಹಿರಿಯಡ್ಕದವರು.. ಇವರ ವೇಷಭೂಷಣ, ಹಾವಭಾವ, ನರೇಂದ್ರ ಮೋದಿಯಂತೆ. ಹೀಗಾಗಿ ಎಲ್ಲೇ ಹೋದರು ಇವರನ್ನು ನೋಡೋಕೆ ಜನ ಮುಗಿಬೀಳುತ್ತಾರೆ.. ಇದೀಗ ಗಣೇಶ್ ಮೂರ್ತಿ ವಿಸರ್ಜನೆ ಮೆರವಣಿಗೆಲ್ಲೂ ಸೇಮ್ ನರೇಂದ್ರ ಮೋದಿಯಂತೆ ಕಂಗೊಳಿಸಿದ್ದು ವಿಶೇಷವಾಗಿತ್ತು.

ಹೌದು, ಹೊನ್ನಾವರ ತಾಲೂಕಿನ ಪ್ರಪ್ರಥಮ ಸಾರ್ವಜನಿಕ ಗಣೇಶೋತ್ಸವ ಎಂದು ಪ್ರಸಿದ್ದತೆ ಪಡೆದಿರುವ ಹೊನ್ನಾವರ ಪಟ್ಟಣದ ಟಪ್ಪರ್ ಹಾಲ್‌ನಲ್ಲಿನ ವಿಶ್ವಹಿಂದೂ ಪರಿಷತ್ ಗಣೇಶೋತ್ಸವ ಈ ವರ್ಷ 55ನೇ ವರ್ಷ ಆಚರಿಸಿಕೊಂಡಿದ್ದು 9 ದಿನಗಳ ಪರ್ಯಂತ ವಿಜ್ರಂಭಣೆಯಿAದ ನಡೆದ ಗಣೇಶೋತ್ಸವ ಅದ್ದೂರಿ ಮೆರವಣೆಗೆಯೊಂದಿಗೆ ವಿಸರ್ಜಿಸಲಾಯಿತು. ಈ ವೇಳೆ ಜ್ಯೂನಿಯರ್ ಮೋದಿ (Junior Modi) ಆಗಮಿಸಿದ್ದು ಸೇಲ್ಪಿ ತಗೆದು ಕೋಳ್ಳಲು ಜನತೆ ಮುಗಿ ಬಿದ್ದಿದುವ ದೃಶ್ಯ ಕಂಡುಬoತು

ಈ ಭವ್ಯ ಶೋಭಾಯಾತ್ರೆಯಲ್ಲಿ ಸರಿಸುಮಾರು 3 ರಿಂದ 4 ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡಿರುವುದು ವಿಶೇಷವಾಗಿತ್ತು. ಪಟ್ಟಣದ ಬೀದಿಗಳಲ್ಲಿ ಮೆರವಣೆಗೆ ಸಾಗುವಾಗ ಕೇಸರಿಯ ಸಮವಸ್ತ್ರ ತೊಟ್ಟ ಸಾವಿರಾರು ಹಿಂದೂ ಕಾರ್ಯಕರ್ತರು ಗಣಪತಿ ಬಪ್ಪಾ ಮೋರಯಾ ಎಂದು ಘೋಷಣೆಯ ಜೋತೆ ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದರು.

ಪಟ್ಟಣದ ಬೀದಿಗಳಲ್ಲಿ ಸಾಗುವಾಗ ಅಪಾರ ಪ್ರಮಾಣದಲ್ಲಿ ಮಹಿಳೆಯರೂ ಪಾಲ್ಗೊಂಡು ಅವರೊಂದಿಗೆ ಹೆಜ್ಜೆಹಾಕಿರುವುದು ಇನ್ನೊಂದು ವಿಶೇಷವಾಗಿತ್ತು. ಎಸ್ಪಿ, ಡಿವೈಎಸ್ಪಿ ನೂರಾರು ಸಂಖ್ಯೆಯ ಪೊಲೀಸ್ ಸಿಬ್ಬಂದಿಗಳು ಶಾಂತಿ ಸುವವ್ಯವಸ್ತೆಗಾಗಿ ಬಿಗಿ ಪೋಲಿಸ್ ಬಂದವಸ್ತ ಕೈಗೊಂಡರು.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button