Important
Trending

ರಸ್ತೆ ದಾಟುತ್ತಿದ್ದ ವೇಳೆ ವಾಹನ ಡಿಕ್ಕಿ: ಸ್ಥಳದಲ್ಲೇ ವ್ಯಕ್ತಿ ಸಾವು: ವಾಹನ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ ಚಾಲಕ

ಕುಮಟಾ : ಹೆದ್ದಾರಿ ದಾಟುತ್ತಿದ್ದ ಪಾದಾಚಾರಿಗೆ ವಾಹನ ಡಿಕ್ಕಿ ಹೊಡೆದ ಪರಿಣಾಮ ಪಾದಾಚಾರಿ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಅಳ್ವೆಕೋಡಿಯ ಸಮೀಪ ನಡೆದಿದೆ. ತಾಲೂಕಿನ ಅಳ್ವೆಕೋಡಿ ನಿವಾಸಿ ಜಗದೀಶ ಪದ್ಮನಾಭ ನಾಯ್ಕ ಮೃತಪಟ್ಟ ವ್ಯಕ್ತಿ ಎಂದು ತಿಳಿದುಬಂದಿದೆ. ಈತನು ಹೆದ್ದಾರಿ ದಾಟುತ್ತಿದ್ದ ಸಂದರ್ಭದಲ್ಲಿ ಮಂಗಳೂರಿನಿoದ ಗೋವಾ ಕಡೆ ತೆರಳುತ್ತಿದ್ದ ಬೋಲೆರೋ ಪಿಕ್‌ಅಪ್ ಡಿಕ್ಕಿ ಹೊಡೆದಿದೆ.

ಅನಧಿಕೃತ ನಾಡ ಬಂದೂಕು ಬಳಸಿ ಕಡವೆ ಕೊಂದಿರುವ ಪ್ರಕರಣ: ಆರೋಪಿಯ ಬಂಧನ

ಡಿಕ್ಕಿ ಹೊಡೆದ ರಭಸಕ್ಕೆ ಪಾದಾಚಾರಿ ಜಗದೀಶ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಅಲ್ಲದೇ ಅಪಘಾತ ಪಡಿಸಿದ ಬೋಲೆರೋ ಪಿಕ್‌ಅಪ್ ವಾಹನ ಚಾಲಕ, ವಾಹನ ನಿಲ್ಲಿಸದೆ ಪರಾರಿಯಾಗಿದ್ದ. ಇದನ್ನು ಗಮನಿಸಿದ ಸ್ಥಳೀಯ ಯುವಕರ ಮಾಹಿತಿ ಮೆರೆಗೆ ಕುಮಟಾ ಪೊಲೀಸರು ಹಿರೇಗುತ್ತಿ ಚಕ್‌ಫೋಸ್ಟ್ ಬಳಿ ವಾಹನವನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಸ್ಮಯ ನ್ಯೂಸ್, ಕುಮಟಾ

Related Articles

Back to top button