Follow Us On

Google News
Important
Trending

ತೀವ್ರ ಹೃದಯಾಘಾತ: ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವು

ಅಂಕೋಲಾ:ತಾಲೂಕಿನ ಸಿಂಗನಮಕ್ಕಿ ನಿವಾಸಿ ರೋಹಿದಾಸ ಬೊಮ್ಮ ಗೌಡ (47) ಅವರು ತೀವೃ ಹೃದಯಾಘಾತವಾಗಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಕೊನೆಯುಸಿರೆಳೆದರು. ಕೃಷಿ ಮತ್ತು ಕುಕ್ಕುಟ (ಕೋಳಿ ) ವ್ಯವಹಾರಿಕ ಕಸುಬಿನವರಾಗಿದ್ದ ಇವರು ತಮ್ಮ
ಸರಳ ಸಜ್ಜನಿಕೆಯ ವ್ಯಕ್ತಿತ್ವದ ಮೂಲಕ ತಮ್ಮನ್ನು ಗುರುತಿಸಿಕೊಂಡು,ಊರಿನ ಹಾಗೂ ಸುತ್ತಮುತ್ತಲ ಹಳ್ಳಿಗಳ ಹತ್ತಾರು ಧಾರ್ಮಿಕ ಮತ್ತಿತರ ವಿಧಾಯಕ ಕಾರ್ಯಕ್ರಮಗಳಿಗೆ ಸಹಾಯ ಸಹಕಾರ ನೀಡುತ್ತ, ಎಲ್ಲ ಜಾತಿ ಜನಾಂಗದವರೊಂದಿಗೆ ಅನೋನ್ಯವಾಗಿ ಬಾಳಿ ಬದುಕಿದ್ದರು.

ರಸ್ತೆ ದಾಟುತ್ತಿದ್ದ ವೇಳೆ ವಾಹನ ಡಿಕ್ಕಿ: ಸ್ಥಳದಲ್ಲೇ ವ್ಯಕ್ತಿ ಸಾವು: ವಾಹನ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ ಚಾಲಕ

ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು ಮತ್ತು ಸಹೋದರ ನಾಗರಾಜ ಸೇರಿದಂತೆ ಕುಟುಂಬ ಸದಸ್ಯರು, ಮತ್ತು ಅಪಾರ ಬಂಧು ಬಳಗ ತೊರೆದಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಶುಕ್ರವಾರ ಬೆಳಿಗ್ಗೆ ನಡೆಸಲಾಯಿತು. ಸಮಾಜದ ಹಿರಿ-ಕಿರಿಯರು, ಬಂಧು – ಬಾಂಧವರು, ಸ್ಥಳೀಯರು ಸೇರಿದಂತೆ ಇತರೆ ಪ್ರಮುಖರು ಅಂತಿಮ ದರ್ಶನ ಪಡೆದುಕೊಂಡರು.

ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಮನೆಯ ನಂದಾದೀಪದಂತಿದ್ದ ಯಜಮಾನನ ಸಾವು ಅರಗಿಸಿಕೊಳ್ಳಲಾಗದೇ ದುಃಖದ ಕತ್ತಲಾವರಿಸುವಂತೆ ಆಗಿದೆ.

ವಿಸ್ಮಯ ನ್ಯೂಸ್ ವಿಲಾಸ್ ನಾಯಕ ಅಂಕೋಲಾ

Back to top button