Join Our

WhatsApp Group
Important
Trending

ಕುಮಟಾದ ಮಿರ್ಜಾನ್ ಮಲ್ಟಿಸ್ಷೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸೂಕ್ತ: ಸ್ಥಳ‌ ಪರಿಶೀಲನೆ ನಡೆಸಿ ಆರೋಗ್ಯ ಸಚಿವರು ಹೇಳಿದ್ದೇನು?

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮಧ್ಯವರ್ತಿ ಸ್ಥಳವಾದ ಕುಮಟಾದಲ್ಲೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ‌ ನಿರ್ಮಾಣ ಮಾಡಲಾಗುವುದು ಎಂದು ಆರೋಗ್ಯ ಸಚಿವ ಡಾ.ಸುಧಾಕರ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಇಲ್ಲಿನ ಮಿರ್ಜಾನದಲ್ಲಿ ಸ್ಥಳ ಪರಿಶೀಲನೆ ಮಾಡಿದ ನಂತರದಲ್ಲಿ ಅವರು ಮಾತನಾಡಿದರು. ಆಸ್ಪತ್ರೆ ನಿರ್ಮಾಣಕ್ಕೆ ಮಿರ್ಜಾನಿನ ಈ ಸ್ಥಳ ಸೂಕ್ತವಾಗಿದೆ ಎಂಬುದು ಸ್ಥಳೀಯ ಮುಖಂಡರ ಅನಿಸಿಕೆ ಎಂದು ಅವರು ಹೇಳಿದರು.

ಕುದಿಯುತ್ತಿರುವ ಬಿಸಿ ಎಣ್ಣೆಯಲ್ಲಿ ಕೈಹಾಕಿ ವಡೆ ಸೇವೆ: ಈ ಭಾಗದಲ್ಲಿದೆ ವಿಶಿಷ್ಠ ಆಚರಣೆ

ಹೌದು, ಆರೋಗ್ಯ, ಕುಟುಂಬಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾಗಿರುವ ಡಾ ಸುಧಾಕರ್ ಅವರು ಉತ್ತರಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಪ್ರಾರಂಭಿಸುವ ಉದ್ದೇಶದಿಂದ ಸ್ಥಳ ಗುರುತಿಸಲು ಇಂದು ಕುಮಟಾ ತಾಲೂಕಿನ ಮಿರ್ಜಾನ್ ಸಮೀಪದ ಎತ್ತಿನ ಬೈಲ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದೇ ಸ್ಥಳವನ್ನು ಅಂತಿಮಗೊಳಿಸಿ‌ ಶೀಘ್ರದಲ್ಲಿಯೇ ಸೂಪರ್ ಸ್ಪೆಷಾಲಿಟಿ‌ ಆಸ್ಪತ್ರೆ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ಇದೇ ಸಚಿವರು ಘೋಷಣೆ ಮಾಡಿದರು.

ವಿಸ್ಮಯ ನ್ಯೂಸ್ ಕುಮಟಾ

Back to top button