Important
Trending

ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆಗೆ ಮುಂದಾದ ಯುವತಿ: ನದಿಗೆ ಬಿದ್ದ ಯುವತಿಯನ್ನು ರಕ್ಷಿಸಿದ ಲೈಫ್ ಗಾರ್ಡ್ ಸಿಬ್ಬಂದಿ

ಕಾರವಾರ: ಯಾವುದೋ ವಿಷಯಕ್ಕೆ ಮನನೊಂದ ಯುವತಿಯೊಬ್ಬಳು ನಗರದ ಕಾಳಿ ನದಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ತಾಲೂಕಿನ ದೇವಭಾಗದ 18ರ ಹರೆಯದ ಯುವತಿಯೊಬ್ಬಳು ಯಾವುದೋ ವಿಷಯಕ್ಕೆ ನೊಂದು ಕಾಳಿ ನದಿಯ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾಳೆ.

25 ಸೈಕಲ್ ಕದ್ದು ಮನೆಯಲ್ಲಿಟ್ಟಿದ್ದ ಕಳ್ಳ: ಬಂಧಿಸಲು ಹೋದಾಗ ಬಟ್ಟೆ ಬದಲಾವಣೆಯ ನೆಪ ಹೇಳಿ ತಪ್ಪಿಸಿಕೊಂಡು ಪರಾರಿ

ಯುವತಿ ನದಿಗೆ ಬಿದ್ದಿರುವುದನ್ನು ಕಾಳಿ ರಿವರ್ ಗಾರ್ಡನ್‌ನ ಲೈಫ್ ಗಾರ್ಡ್ಸ್ಗಳು ಕಂಡಿದ್ದು, ತಕ್ಷಣವೇ ಸಮೀಪದ ಬೋಟುಗಳಲ್ಲಿ ತೆರಳಿ ಯುವತಿಯನ್ನ ರಕ್ಷಿಸಿದ್ದಾರೆ. ಸದ್ಯ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂಬ ಮಾಹಿತಿ ಸಿಕ್ಕಿದ್ದು, ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

land for sale

Back to top button