Important
Trending

25 ಸೈಕಲ್ ಕದ್ದು ಮನೆಯಲ್ಲಿಟ್ಟಿದ್ದ ಕಳ್ಳ: ಬಂಧಿಸಲು ಹೋದಾಗ ಬಟ್ಟೆ ಬದಲಾವಣೆಯ ನೆಪ ಹೇಳಿ ತಪ್ಪಿಸಿಕೊಂಡು ಪರಾರಿ

ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ಕಿಲಾಡಿ ಕಳ್ಳ!

ಭಟ್ಕಳ: ಸೈಕಲ್ ಹಾಗೂ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿ ಮನೆ ಮೇಲೆ ದಾಳಿ ನಡೆದ ಪೋಲಿಸರು 25 ಸೈಕಲ್, ಹಾಗೂ 3 ಬೈಕ್ ವಶಕ್ಕೆ ಪಡೆದುಕೊಂಡ ಘಟನೆ ಭಟ್ಕಳದ ಕೊಟೇಶ್ವರ ಬಳಿ ನಡೆದಿದೆ. ಬಂಧಿತ ಆರೋಪಿ ಇಲ್ಲಿನ ಕೋಟೇಶ್ವರ ನಗರದ ನಿವಾಸಿ ಮಂಜು ಕೊರಗರ ಎಂದು ತಿಳಿದು ಬಂದಿದೆ. ಈತ ತಾಲೂಕಿನ ವಿವಿಧ ಭಾಗಗಳಲ್ಲಿ ಕಳ್ಳತನ ಮಾಡಿದ ಸೈಕಲ್ ಹಾಗೂ ಬೈಕನನ್ನು ತನ್ನ ಮನೆಯಲ್ಲಿ ತಂದು ಜಮಾ ಇಡುತ್ತಿದ್ದ ಎಂದು ಹೇಳಾಗಿದೆ.

Recruitment 2022: ಆರಂಭಿಕ ವೇತನ 43 ಸಾವಿರ: HAL ನಲ್ಲಿ ಉದ್ಯೋಗಾವಕಾಶ: SSLC, PUC, ITI ಆದವರು ಅರ್ಜಿ ಸಲ್ಲಿಸಬಹುದು

ಖಚಿತ ಮಾಹಿತಿ ಮೇರೆಗೆ ನಗರ ಠಾಣೆ ಸಿಪಿಐ ದಿವಾಕರ ಪಿ, ನೇತೃತ್ವದ ತಂಡ ಮನೆ ಮೇಲೆ ದಾಳಿ ನಡೆಸಿ ಮನೆಯಲ್ಲಿ ಇಟ್ಟುದ್ದ 25 ಸೈಕಲ್,ಹಾಗೂ 3 ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ. . ಸೈಕಲ್ ಕಳೆದುಕೊಂಡ ಹಲವಾರು ಯುವಕರು ಈ ಬಗ್ಗೆ ಸುದ್ದಿ ತಿಳಿದು ತಮ್ಮ ಸೈಕಲ್ ಹಾಗೂ ಬೈಕ್ ಗೆ ಯಾವುದೆಂದು ಹುಡುಕಾಟ ನಡೆಸಿದ್ದಾರೆ. ಈ ಬಗ್ಗೆ ಭಟ್ಕಳ ನಗರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಯ ಹಿಂಬದಿಯಿoದ ಆರೋಪಿ ಪರಾರಿ

ಆರೋಪಿ ಕದ್ದ ಸೈಕಲ್ ಮತ್ತು ಬೈಕ್‌ಗಳು

ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದ ವೇಳೆ ಆರೋಪಿ ಮನೆಯಲ್ಲೇ ಇದ್ದ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆಯಲು ಮುಂದಾದಾಗ, ಬಟ್ಟೆ ಬದಲಾವಣೆ ಮಾಡುವ ನೆಪದಲ್ಲಿ ಮನೆಯ ಹಿಂಬದಿಯಿoದ ಆರೋಪಿ ಮಂಜು ಕೊರಗರ ಪರಾರಿಯಾಗಿದ್ದಾನೆ. ತಪ್ಪಿಸಿಕೊಂಡ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Related Articles

Back to top button