Focus NewsImportant
Trending

ಸಿಲೆಂಡರ್ ಸ್ಪೋಟ: ಐದಕ್ಕೂ ಅಧಿಕ ಕಾರ್ಮಿಕ ಶೆಡ್‌ಗಳು ಸುಟ್ಟುಭಸ್ಮ: 25 ಕ್ಕೂ ಅಧಿಕ ಮೊಬೈಲ್ ಬೆಂಕಿಗೆ ಆಹುತಿ

ಕಾರವಾರ: ಸಿಲಿಂಡರ್ ಸ್ಪೋಟಗೊಂಡ ಪರಿಣಾಮವಾಗಿ ಅಪಾರ ಹಾನಿ ಸಂಭವಿಸಿದ ಘಟನೆ ತಾಲೂಕಿನ ಮುದಗಾ ಲೇಬರ್ ಕಾಲೋನಿಯಲ್ಲಿ ನಡೆದಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, 25ಕ್ಕೂ ಅಧಿಕ ಕಾರ್ಮಿಕರ ಮೊಬೈಲ್‌ಗಳು ಬೆಂಕಿಗೆ ಆಹುತಿಯಾಗಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಯಕ್ಷಗಾನ ವೇಷಧರಿಸಿ ಗಮನಸೆಳೆದ ಆರೋಗ್ಯ ಸಚಿವರು!

ಈ ಅವಘಡದಲ್ಲಿ ಐದಕ್ಕೂ ಅಧಿಕ ಕಾರ್ಮಿಕರ ಶೆಡ್‌ಗಳು ಸುಟ್ಟು ಭಸ್ಮಗೊಂಡಿದೆ ಎನ್ನಲಾಗಿದೆ. ನೌಕಾನೆಲೆಯ ಕಟ್ಟಡ ಕಾಮಗಾರಿಗೆ ಹೊರರಾಜ್ಯದಿಂದ ನೂರಕ್ಕೂ ಅಧಿಕ ಕಾರ್ಮಿಕರು ಈ ಕಾಲೋನಿಯಲ್ಲಿ ಶೆಡ್ ಕಟ್ಟಿಕೊಂಡು ವಾಸ ಮಾಡುತ್ತಿದ್ದು, ಬೆಳ್ಳಂಬೆಳಿಗ್ಗೆ ಇಲ್ಲಿ ಸಿಲೆಂಡರ್ ಸ್ಫೋಟಗೊಂಡಿವೆ.ಸ್ಫೋಟದ ತೀವ್ರತೆಗೆ ಶೆಡ್‌ನಲ್ಲಿದ್ದ ಎಲ್ಲಾ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದು, ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

land for sale

Back to top button